ದೇಶದಲ್ಲೇ ಫಸ್ಟ್.. ಮಹಾರಾಷ್ಟ್ರದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!

ಮುಂಬೈ: ಮದ್ಯಪ್ರಿಯರಿಗೆ ಮಹಾರಾಷ್ಟ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಸರ್ಕಾರ ಮದ್ಯವನ್ನ ಮನೆ ಬಾಗಿಲಿಗೇ ತಲುಪಿಸಲು ಹೊಸ ನೀತಿ ತರಲು ಮುಂದಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಅಬಕಾರಿ ಸಚಿವ ಚಂದ್ರಶೇಕರ್ ಬಾವಾಂಕುಲೆ, ಮದ್ಯ ಮಾರಾಟಗಾರರಿಗೆ ಇದು ಶಾಕ್ ಕೊಡುವ ಸಂಗತಿ. ಇಡೀ ದೇಶದಲ್ಲೇ ಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ಮದ್ಯವನ್ನ ಮನೆ ಬಾಗಿಲಿಗೆ ತಲುಪಿಸುವ ಹೊಸ ನೀತಿಯನ್ನ ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ.

ಕುಡಿದ ಮತ್ತಿನಲ್ಲಿ ವಾಹನ ಚಾಲನೆಯಿಂದ ಆಗುವ ಅಪಘಾತಗಳು ಹೆಚ್ಚಾಗುತ್ತಿದ್ದು, ಇದರಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿದೆ. ಇದನ್ನ ತಡೆಯಲು ಸರ್ಕಾರವು ಸಾರ್ವಜನಿಕರು ಆನ್‍ಲೈನ್ ನಲ್ಲಿ ಹೇಗೆ ಹಣ್ಣು-ತರಕಾರಿಗಳನ್ನ ಖರೀದಿ ಮಾಡುತ್ತಾರೋ ಅದೇ ರೀತಿಯಾಗಿ ಇ- ಪೋರ್ಟಲ್ ಮೂಲಕ ಈ ಸೇವೆಯನ್ನ ಪಡೆಯಬಹುದು ಎಂದು ಬಾವಾಂಕುಲೆ ಹೇಳಿದ್ದಾರೆ. ಇದನ್ನು ಓದಿ:  ಖಾವಿ ಧರಿಸಿ ಮದ್ಯ ಕುಡಿಯಲು ಬಂದ ವ್ಯಕ್ತಿಗೆ ಬಾರಿನಲ್ಲೇ ಹಲ್ಲೆ

ಆನ್‍ಲೈನ್ ನಲ್ಲಿ ಖರೀದಿ ಮಾಡುವ ವ್ಯಕ್ತಿಯ ವಯಸ್ಸನ್ನು ತಿಳಿದುಕೊಳ್ಳಲು, ಗ್ರಾಹಕರ ಆಧಾರ್ ನಂಬರ್ ಅನ್ನು ಪಡೆದುಕೊಳ್ಳಲಾಗುವುದು. ಅಕ್ರಮ ಮದ್ಯ ಸಾಗಾಣಿಕೆಯನ್ನ ತಡೆಯಲು ಸರ್ಕಾರವೂ ಎಲ್ಲಾ ಮದ್ಯ ಬಾಟಲಿಗಳ ಮೇಲೆ ಟ್ಯಾಗ್ ಗಳನ್ನ ಅಳವಡಿಸಲಾಗುತ್ತದೆ. ಈ ಟ್ಯಾಗ್‍ನ ಸಹಾಯದಿಂದ ಉತ್ಪದನೆಯ ದಿನಾಂಕ, ಸ್ಥಳ ಮತ್ತು ಮಾರಾಟದ ಮಾಹಿತಿಯನ್ನ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ. ಇದನ್ನು ಓದಿ: ಕುಡುಕರ ಜೇಬಿಗೆ ಕತ್ತರಿ- ಸಿಎಲ್ ಬಾರ್ ಗಳಲ್ಲಿ ದುಪ್ಪಟ್ಟು ಹಣ ವಸೂಲಿ

ಸರ್ಕಾರದ ಈ ನಡೆಯನ್ನ ಮೆಚ್ಚಿದ ಹೈಕೋರ್ಟ್ ವಕೀಲರಾದ ಶ್ರೀರಾರ್, “ಸರ್ಕಾರದ ಈ ಕಾನೂನಿಂದ ಅಪಘಾತ ತಡೆ, ಜನರ ಸಮಯವನ್ನ ಉಳಿಸಿದಲ್ಲದೇ ಸಾಕಷ್ಟು ಯುವ ಜನತೆಗೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ” ಎಂದು ಹೇಳಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ(ಎನ್‍ಸಿಆರ್‍ಬಿ) ಪ್ರಕಾರ 2015 ರಲ್ಲಿ ಒಟ್ಟು ದಾಖಲಾದ 4.64 ಲಕ್ಷ ಅಪಘಾತಗಳಲ್ಲಿ ಪೈಕಿ 1.5% ಅಪಘಾತಗಳಿಗೆ ಮದ್ಯಸೇವನೆಯೇ ಕಾರಣವಾಗಿದೆ. ಒಟ್ಟು 6,295 ಮಂದಿ ಗಾಯಗೊಂಡಿದ್ದರೆ 2,958 ಮಂದಿ ಮೃತಪಟ್ಟಿದ್ದರು. ಇದನ್ನು ಓದಿ: ಗೋವಾದಲ್ಲಿ ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿದ್ರೆ 2,500 ರೂ. ದಂಡ: ಪರಿಕ್ಕರ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *