ನಮೋ ಪ್ರಯಾಣಕ್ಕೆ ಸಾರಥಿಯಾದ ಮಹಿಳಾ ಲೋಕೋಪೈಲಟ್‌!

ಬೆಂಗಳೂರು: ವೈಟ್ ಫೀಲ್ಡ್ ಟು ಕೆ ಆರ್ ಪುರಂ (Whitefield-KR Puram Namma Metro) ನೇರಳೆ ಮಾರ್ಗದ ಮೆಟ್ರೋಗೆ ಶನಿವಾರ (ಇಂದು) ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದರು. ಜೊತೆಗೆ ಮೆಟ್ರೋದಲ್ಲಿ ಪ್ರಧಾನಿ ಮೋದಿಯವರು ಜರ್ನಿ ಮಾಡಿ ಮೆಟ್ರೋ ಸಿಬ್ಬಂದಿ ವಿದ್ಯಾರ್ಥಿಗಳ ಜೊತೆ ಸಂವಾದ ಕೂಡ ಮಾಡಿದ್ರು. ವಿಶೇಷ ಅಂದ್ರೆ ಪ್ರಧಾನಿ ಉದ್ಘಾಟನೆ ಮಾಡಿ ಮೊದಲ ಜರ್ನಿ ಮಾಡಿದ ಮೆಟ್ರೋದ ಸಾರಥ್ಯ ವಹಿಸಿದ್ದು ಮಹಿಳಾ ಲೋಕೋಪೈಲಟ್ ಪ್ರಿಯಾಂಕ (Loco Pilot Priyanka).

ಹೌದು. 5 ವರ್ಷದಿಂದ ಪೈಲಟ್ ಆಗಿರುವ ಪ್ರಿಯಾಂಕ ಇಂದು ಪ್ರಧಾನಿ ಕುಳಿತಿದ್ದ ಮೆಟ್ರೋ ಸಾರಥಿಯಾಗಿದ್ರು. ದೇಶದ ಸಾರಥ್ಯ ವಹಿಸಿರುವ ಪ್ರಧಾನಿಗೆ ಸಾರಥಿಯಾಗಿದ್ದು ಫುಲ್ ಖುಷಿಯಾಗಿದೆ ಅಂತಾ ಪ್ರಿಯಾಂಕ ಸಂಭ್ರಮ ಪಟ್ಟರು. ಇದನ್ನೂ ಓದಿ: ನಾನು ಕೋಲಾರ ಕೂಡ ಕೇಳಿದ್ದೇನೆ- ಸಿದ್ದರಾಮಯ್ಯ

ಪ್ರಧಾನಿ ಮೆಟ್ರೋ ಟ್ರೈನ್ ಸಾರಥ್ಯ ವಹಿಸೋದು ಅಂದ್ರೆ ನಿಜವಾಗಲೂ ಸುಲಭದ ಮಾತಲ್ಲ. ಸುರಕ್ಷತೆ ದೃಷ್ಟಿಯಿಂದ ಸವಾಲು ಕೂಡ. ಹೀಗಾಗಿ 15 ದಿನಕ್ಕೂ ಮುನ್ನವೇ ಲೋಕೋಪೈಲೆಟ್‍ಗೆ ಟ್ರೈನಿಂಗ್ ಕೊಡಲಾಗಿತ್ತು. ಜೊತೆಗೆ ಕೌನ್ಸಿಲಿಂಗ್ ಗಳು ನಡೆಯುತ್ತಿತ್ತು. ಇನ್ನೂ ಪ್ರಧಾನಿಯವರನ್ನು ನೇರವಾಗಿ ನೋಡೋಕೆ ಸಾಧ್ಯವಾಗದೇ ಇದ್ದರೂ ಮಾನಿಟರ್ ನಲ್ಲಿ ನೋಡುತ್ತಿದ್ದೆ ಎಂದು ಪ್ರಿಯಾಂಕಾ ಸಂತಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ದೆಹಲಿಯ ನಂತ್ರ ಬೆಂಗಳೂರು ಮೆಟ್ರೋ ದೇಶದ ಎರಡನೇ ಅತ್ಯಂತ ದೊಡ್ಡ ಜಾಲವಾಗಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ದೇಶದ ಪ್ರಧಾನಿಯ ಮೊದಲ ಮೆಟ್ರೋ ಜರ್ನಿಯ ಲೋಕೋಪೈಲಟ್ ಆಗಿ ಮಹಿಳೆ ಕಾರ್ಯನಿರ್ವಹಿಸಿದ್ದು ಇನ್ನಷ್ಟು ಹೆಮ್ಮೆಯ ವಿಚಾರವಾಗಿದೆ.

Comments

Leave a Reply

Your email address will not be published. Required fields are marked *