ವೈದ್ಯಲೋಕದ ಅಚ್ಚರಿ : ಇಬ್ಬರು ತಾಯಂದಿರ ಗರ್ಭದಿಂದ ಜನಿಸಿದ ಒಂದು ಮಗು

ಆಸ್ಟಿನ್: ಇಬ್ಬರು ಸಲಿಂಗಿ ದಂಪತಿ ಮದುವೆಯಾಗಿದ್ದು, ಅವರಿಬ್ಬರು ಸೇರಿ ಒಂದು ಮಗುವಿಗೆ ಜನ್ಮ ನೀಡಿರುವ ಅಚ್ಚರಿಯೊಂದು ನಡೆದಿದೆ.

ಒಂದೇ ಮಗುವನ್ನು ಇಬ್ಬರು ಸಲಿಂಗಿಗಳು ತಮ್ಮ ಗರ್ಭದಲ್ಲಿರಿಸಿಕೊಂಡು ಜನ್ಮ ನೀಡಿದ್ದಾರೆ. ಈಗ ಆ ಮಗುವಿಗೆ ಇಬ್ಬರು ಅಮ್ಮಂದಿರಾಗಿದ್ದು, ವೈದ್ಯಲೋಕದ ಅಚ್ಚರಿ ಘಟನೆ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಎಂದು ಹೇಳಲಾಗುತ್ತಿದೆ.

ಈ ಅಚ್ಚರಿ ಘಟನೆ ನಾರ್ಥ್ ಟೆಕ್ಸಾಸ್ ನ ಮೌಂಟೇನ್ ಸ್ಪ್ರಿಂಗ್ಸಿ ಎಂಬಲ್ಲಿ ನಡೆದಿದೆ. ಟೆಕ್ಸಾಸ್ ನಿವಾಸಿಗಳಾದ ಆಶ್ಲೆ ಮತ್ತು ಬ್ಲಿಸ್ ಕೌಲ್ಟರ್ ಇಬ್ಬರು ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವನ್ನು ಪಡೆಯಲು ಇವರು ಸುಮಾರು 6,25,557 ರೂ, ಖರ್ಚು ಮಾಡಿದ್ದಾರೆ.

ಮೊದಲಿಗೆ ಪ್ರಯೋಗಾಲಯದ ಮೂಲಕ ದಾನಿಗಳಿಂದ 36 ವರ್ಷದ ಬ್ಲಿಸ್ ಅವರು ಅಂಡಾಣುಗಳನ್ನು ಪಡೆದುಕೊಂಡಿದ್ದರು. ಅದನ್ನು ಬ್ಲಿಸ್ ಗರ್ಭದಲ್ಲಿ ಇರಿಸಲಾಯಿತು. ಐದು ದಿನಗಳ ನಂತರ ಬ್ಲಿಸ್ ಮಗುವಿಗೆ ಜನ್ಮ ನೀಡಲು ಹಿಂದೇಟು ಹಾಕಿದರು. ಮತ್ತೆ ವೈದ್ಯರ ಸಲಹೆಯ ಮೇರೆಗೆ ಅಂಡಾಣುಗಳನ್ನು ಸಂಗಾತಿ 28 ವರ್ಷದ ಆಶ್ಲೆ ಗರ್ಭದಲ್ಲಿ ಇರಿಸಲಾಯಿತು.

ಇದೇ ವರ್ಷದ ಜೂನ್ ತಿಂಗಳಿನಲ್ಲಿ ಆಶ್ಲೆ ಅವರು ಆರೋಗ್ಯಕರವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಶ್ಲೇ ಮತ್ತು ಬ್ಲಿಸ್ ಆರು ವರ್ಷಗಳ ಹಿಂದೆ ಭೇಟಿಯಾಗಿದ್ದು, ಜೂನ್ 2015 ರಲ್ಲಿ ಮದುವೆಯಾದ್ದರು. ಇವರಿಬ್ಬರೂ ಒಂದು ದಿನ ತಾವು ಮಗುವನ್ನು ಪಡೆಯಬೇಕು ಎಂದು ನಿರ್ಧಾರ ಮಾಡಿದ್ದಾರೆ.

ಆದರೆ ಬ್ಲಿಸ್ ಅವರು ಮಗುವಿಗೆ ಗರ್ಭಿಣಿಯಾಗಬೇಕೆಂದು ಬಯಸಲಿಲ್ಲ. ಒಂದೇ ಲಿಂಗದ ಸ್ತ್ರೀ ದಂಪತಿ ಮಗುವನ್ನು ಪಡೆಯಬೇಕೆಂದರೆ ಒಬ್ಬ ಮಹಿಳೆ ಇತರರ ಅಂದರೆ ದಾನಿಗಳು ಮೂಲಕ ವೀರ್ಯಾಣು ಪಡೆದು ಮಕ್ಕಳನ್ನು ಪಡೆಯಬೇಕಾಗುತ್ತದೆ. ಅದೇ ರೀತಿ ಬ್ಲಿಸ್ ಮತ್ತು ಆಶ್ಲೇ ಇಬ್ಬರೂ ಮಗುವನ್ನು ಪಡೆಯಲು ಬಯಸಿದ್ದರು.

ಆ ಮೂಲಕ ಮೊದಲಿಗೆ ಬ್ಲಿಸ್ ಡಾ. ಕ್ಯಾಥಿ ಡೂಡಿ ಬಗ್ಗೆ ತಿಳಿದು ಅವರ ಬಳಿ ಚಿಕಿತ್ಸೆ ಪಡೆದು ದಾನಿಗಳ ಮೂಲಕ ವೀರ್ಯಾಣು ಪಡೆದು ಗರ್ಭ ಧರಿಸಿದರು. ಆದರೆ ಕಾರಣನಂತರಗಳಿಂದ ಆ ಗರ್ಭವನ್ನು ತನ್ನ ಪಾಟ್ನರ್ ಆಶ್ಲೆಗೆ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಇಬ್ಬರು ಒಂದೇ ಮಗುವನ್ನು ತಮ್ಮ ಗರ್ಭದಲ್ಲಿರಿಸಿಕೊಂಡು  ಜನ್ಮ ನೀಡಿದ್ದಾರೆ. ಈ ಮೂಲಕ ಇಬ್ಬರು ಒಂದೇ ಮಗುವಿಗೆ ಅಮ್ಮನಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *