ಬೆಂಗಳೂರಲ್ಲಿ ಕಂಪನಿ ತೆರೆಯಲು ಪರದಾಟ – ಟ್ವೀಟ್ ಮೂಲಕ ಉದ್ಯಮಿ ಬೇಸರ

– ಸಮಸ್ಯೆಗೆ ಸ್ಪಂದಿಸುವುವಾಗಿ ಸಚಿವ ಎಂ.ಬಿ ಪಾಟೀಲ್ ಭರವಸೆ

ಬೆಂಗಳೂರು: ರಾಜಧಾನಿಯಲ್ಲಿ ತನ್ನ ಕಂಪನಿಯನ್ನು ನೋಂದಾಯಿಸಲು ಎರಡು ತಿಂಗಳ ಕಾಲ ಪ್ರಯತ್ನಪಟ್ಟರೂ ನೋಂದಣಿಯಾಗಿಲ್ಲ ಎಂದು ಐಟಿ ಉದ್ಯಮಿಯೊಬ್ಬರು ಟ್ವೀಟ್ ಮೂಲಕ ನೋವು ಹಂಚಿಕೊಂಡಿದ್ದಾರೆ.

ಬ್ರಿಜ್ ಸಿಂಗ್ ಎಂಬವರು ತನ್ನ ಕಂಪನಿಯನ್ನು ನೋಂದಾಯಿಸಲು ಎದುರಿಸುತ್ತಿರುವ ಸಮಸ್ಯೆಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದು, ಅಮೆರಿಕಾಗೆ ಹಿಂತಿರುಗಲು ಸಮಯ ಬಂದಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ವಿಸಿ ನಾಲೆಗೆ ಬಿತ್ತು ಕಾರು – ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವು

ಎರಡು ತಿಂಗಳು ಕಳೆದರೂ ತನ್ನ ಕಂಪನಿಯನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ನಾನು ಅಮೆರಿಕಕ್ಕೆ ಮರಳುವ ಸಮಯ ಬಂದಿದೆ. ಇದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ. ಬೆಂಗಳೂರು ಮತ್ತು ಭಾರತದ ಬಗ್ಗೆ ಪ್ರೀತಿಯಿದೆ. ಆದರೆ ಭಾರತದಲ್ಲಿ (ಬೆಂಗಳೂರಿನಲ್ಲಿ) ಕಂಪನಿಯನ್ನು ನೋಂದಾಯಿಸಲು 2 ತಿಂಗಳುಗಳ ಕಾಲ ಪ್ರಯತ್ನಿಸಿದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಜುಲೈ 27 ರಂದು ಟ್ವೀಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದರು.

ಬ್ರಿಜ್ ಸಿಂಗ್ ಟ್ವೀಟ್‌ಗೆ ರೀ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ನಿಮಗೆ ಸಮಸ್ಯೆ ಆಗಿರುವುಕ್ಕೆ‌ ಕ್ಷಮೆ ಇರಲಿ. ನಿಮ್ಮ ಕಂಪನಿ‌ ನೋಂದಣಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅದೇನೆ ಇರಲಿ, ವೈಯುಕ್ತಿಕವಾಗಿ ಬಂದು ಭೇಟಿ‌ ಮಾಡುವುದಾದರೆ ಸಂತೋಷ ಎಂದು ಸಮಸ್ಯೆಗೆ ಸ್ಪಂದಿಸಿದ್ದಾರೆ. ಇದನ್ನೂ ಓದಿ: ಅಂಬೋಲಿ ಅರಣ್ಯ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ – ಪುಣೆ ಎಟಿಎಸ್‌ನಿಂದ ಇಬ್ಬರು ಶಂಕಿತ ಉಗ್ರರ ಬಂಧನ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]