ಎಕ್ಸೆಲ್ ಕಟ್ ಆಗಿ ನಿಯಂತ್ರಣ ತಪ್ಪಿದ್ದ ಬಸ್ – ದೊಡ್ಡ ದುರಂತ ತಪ್ಪಿಸಿದ ಚಾಲಕನಿಗೆ ಸನ್ಮಾನ

ಹುಬ್ಬಳ್ಳಿ: 100ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಸಾರಿಗೆ ಬಸ್‌ನ (bus) ಎಕ್ಸೆಲ್ (Axle) ಕಟ್ ಆಗಿ ನಿಯಂತ್ರಣ ತಪ್ಪಿದ್ದು, ಅದೃಷ್ಟವಶಾತ್ ಚಾಲಕನ (Driver) ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

ಶಿರಹಟ್ಟಿಯಿಂದ ಹುಬ್ಬಳ್ಳಿಗೆ (Hubballi) ಬರುತ್ತಿದ್ದ ಬಸ್‌ನ ಎಕ್ಸೆಲ್ ಕಟ್ ಆಗಿತ್ತು. ಬಸ್‌ನಲ್ಲಿ ಮಲ್ಲಿಗವಾಡ, ಮುಳಗುಂದ, ಚಿಂಚಲಿ, ಕೋಳಿವಾಡದಿಂದ ಬಂದಿದ್ದ ಪ್ರಯಾಣಿಕರಿದ್ದರು. ಶಾಲೆ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದಾಗಿ ಎಕ್ಸೆಲ್ ಕಟ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಕಳ್ಳತನಕ್ಕೆ ಬಂದು ಹಣ, ಬಂಗಾರ ದೋಚಿದ್ದಲ್ಲದೇ ಊಟ ಮಾಡಿ ಹೋದ ಕಳ್ಳರು!

ಸದ್ಯ ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತ ತಪ್ಪಿದೆ. ಸಂಭವಿಸಬಹುದಾಗಿದ್ದ ಅಪಘಾತವನ್ನು ತಪ್ಪಿಸಿದ ಹಿನ್ನೆಲೆ ಕೋಳಿವಾಡ ಗ್ರಾಮಸ್ಥರು ಚಾಲಕನಿಗೆ ಸನ್ಮಾನ ಮಾಡಿದ್ದಾರೆ. ಇದನ್ನೂ ಓದಿ: KPSC ಬೋರ್ಡ್ ಮುಂದೆ ನೂರಾರು ಪತ್ರಗಳನ್ನು ಚೆಲ್ಲಿ ಅಭ್ಯರ್ಥಿ ಹೈಡ್ರಾಮಾ