ಪತ್ರಕರ್ತ ರವಿ ಬೆಳಗೆರೆ ಸುಪಾರಿ ಕೇಸಲ್ಲಿ ಹೊಸ ಟ್ವಿಸ್ಟ್!

ಬೆಂಗಳೂರು: ಸುಮಾರು 14 ವರ್ಷ ಜೊತೆಗಿದ್ದ ಸಹೋದ್ಯೋಗಿ ಹಾಗೂ ತನ್ನ ಎರಡನೇ ಮಗ ಎಂದೇ ಕರೆದಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ನೀಡಿರುವ ಸುಪಾರಿ ಕೇಸ್ ಮತ್ತೊಂದು ತಿರುವು ಪಡೆದಿದೆ.

ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ರೂಪಿಸಿದ ಮೊದಲ ಸಂಚು ವಿಫಲವಾದ ಕೂಡಲೇ ಹಂತಕರಿಗೆ ತಲೆಮರೆಸಿಕೊಳ್ಳುವಂತೆ ರವಿ ಬೆಳಗೆರೆ ಸೂಚಿಸಿದ್ದರು. ಆಗಸ್ಟ್ 28ರ ಮೊದಲ ಪ್ಲಾನ್ ವಿಫಲವಾದ ಬಳಿಕ ಅಂದರೆ, ತಿಂಗಳು ಕಳೆದ ಬಳಿಕ ಮತ್ತೊಮ್ಮೆ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸ್ಕೆಚ್ ಹಾಕಿದ್ದರು. ಆದ್ರೆ ಅಂದು ಕೂಡ ಸುನಿಲ್ ಹೆಗ್ಗರವಳ್ಳಿ ಸ್ವಲ್ಪದ್ರಲ್ಲೇ ಪಾರಾಗಿದ್ದರು. ಇದನ್ನೂ ಓದಿ: ನನ್ನ ಕೊಲೆಗೆ ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರೆಂದು ಕೇಳಿ ಶಾಕ್ ಆಗಿದೆ: ಸುನೀಲ್ ಹೆಗ್ಗರವಳ್ಳಿ

ಸುನಿಲ್ ಮನೆಯಲ್ಲಿ ಸಿಸಿಟಿವಿ ಇದ್ದಿದ್ದರಿಂದ ಮೊದಲ ಪ್ಲಾನ್ ವಿಫಲವಾದ ಬಳಿಕ, 2ನೇ ಬಾರಿ ಬೇರೆ ಕಡೆ ಹತ್ಯೆಗೆ ಸಂಚು ರೂಪಿಸಿದ್ದರು. ಕರೆ ಮಾಡಿ ಬೇರೆ ಕಡೆಗೆ ಕರೆಸಿಕೊಂಡು ಹತ್ಯೆಗೆ ಪ್ಲಾನ್ ಮಾಡಿದ್ದರು. ತನ್ನ ಆಪ್ತನ ಮೊಬೈಲ್‍ನಿಂದ 20ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ಆದ್ರೆ ಈ ಬಾರಿ ಸುನಿಲ್ ಹೆಗ್ಗರವಳ್ಳಿ ಧರ್ಮಸ್ಥಳದಲ್ಲಿ ಇದ್ದಿದ್ರಿಂದ ಪಾರಾಗಿದ್ದರು. ಇದರಿಂದ ಬೇಸತ್ತು ಶಶಿಧರ್ ಮುಂಡೇವಾಡಗೆ ರವಿಬೆಳಗೆರೆ ಬೈದು ಕಳುಹಿಸಿದ್ದರು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು. ಸದ್ಯ ರವಿಬೆಳಗೆರೆ ಸಿಸಿಬಿ ವಶದಲ್ಲಿದ್ದಾರೆ. ಇದನ್ನೂ ಓದಿ: ರವಿ ಬೆಳಗೆರೆ ಹೆಸರನ್ನ ಸುಪಾರಿ ಹಂತಕ ಬಾಯ್ಬಿಟ್ಟಿದ್ದು ಹೇಗೆ? ಬೆಳಗೆರೆ ಕಚೇರಿಯಲ್ಲಿ ಏನು ಸಿಕ್ಕಿದೆ?

https://www.youtube.com/watch?v=X0xApCHxdCQ

https://www.youtube.com/watch?v=x86o3NINFFM

https://www.youtube.com/watch?v=J4W3Dqe2jrY

https://www.youtube.com/watch?v=NVU9MGtsE60

Comments

Leave a Reply

Your email address will not be published. Required fields are marked *