ಕೊರೊನಾ ವೈರಸ್‍ಗೆ ಕೇರಳದಲ್ಲಿ 2ನೇ ಬಲಿ

ತಿರುವನಂತಪುರ: ಚೀನಾದಲ್ಲಿ ಮರಣ ಮೃದಂಗ ಬಾರಿಸುವ ಕೊರೊನಾ ವೈರಸ್ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕೇರಳದಲ್ಲಿ ಕೋವಿಡ್ 19ಗೆ 2ನೇ ಬಲಿಯಾಗಿದೆ.

ಕೇರಳದ ತಿರುವನಂತಪುರಂ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ 68 ವರ್ಷದ ವೃದ್ಧ ಇಂದು ಮೃತಪಟ್ಟಿದ್ದಾರೆ. ಸದ್ಯ ಕೇರಳದಲ್ಲಿ ಒಟ್ಟು 234 ಮಂದಿಗೆ ಸೋಂಕು ತಗುಲಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 1347ಕ್ಕೆ ಏರಿಕೆಯಾಗಿದೆ.


ಮಾರ್ಚ್ 28ರಂದು ಕೊಚ್ಚಿಯ ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ 69 ವರ್ಷದ ವೃದ್ಧ ಮೃತಪಟ್ಟಿದ್ದರು. ಕೊಚ್ಚಿಯ ಚುಲ್ಲಿಕಲ್ ನಿವಾಸಿ ವೃದ್ಧ ಮಾರ್ಚ್ 16ರಂದು ದುಬೈನಿಂದ ಮರಳಿದ್ದರು. ಅವರೊಂದಿಗೆ ಸಂಪರ್ಕ ಹೊಂದಿದ್ದ ಪತ್ನಿ ಹಾಗೂ ಚಾಲಕನಿಗೂ ಸೋಂಕು ತಗುಲಿದ್ದು, ಅವರನ್ನು ಕೂಡ ಕಲಾಮಸ್ಸೆರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಕೇರಳಕ್ಕೆ ಕರ್ನಾಟಕದ ಗಡಿ ಬಂದ್ ಮಾಡಿರೋದಕ್ಕೆ ಕಾಸರಗೊಡಿನ ಸಂಸದ ರಾಜಮೋಹನ್, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತುರ್ತು ಮತ್ತು ಅಗತ್ಯ ಸೇವೆಗಳಿಗೆ ಗಡಿ ತೆರೆಯಲು ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

Comments

Leave a Reply

Your email address will not be published. Required fields are marked *