ಕಾರು ಸಮೇತ ಆಂಧ್ರ ಸಿಎಂ ಸಹೋದರಿ ಶರ್ಮಿಳಾರನ್ನು ಎಳೆದೊಯ್ದ ಪೊಲೀಸರು

ಹೈದರಾಬಾದ್: ತೆಲಂಗಾಣದಲ್ಲಿ (Telangana) ಇಂದು ರಾಜಕೀಯ ಹೈಡ್ರಾಮಾ ನಡೆದಿದೆ. ತೆಲಂಗಾಣ ರಾಜಕಾರಣಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ (Y.S.Jagan Mohan Reddy) ಅವರ ಸಹೋದರಿ ವೈ.ಎಸ್.ಶರ್ಮಿಳಾ (Y.S.Sharmila) ಅವರ ಕಾರನ್ನು ನಗರ ಪೊಲೀಸರು ತಂದ ಕ್ರೇನ್ ಎಳೆದೊಯ್ದ ಘಟನೆ ಹೈದರಾಬಾದ್‌ನ (Hyderabad) ಆರ್ಟಿರಿಯಲ್ ರಸ್ತೆ ಬಳಿ ನಡೆಯಿತು.

ಶರ್ಮಿಳಾ ಅವರು ಕಾರಿನೊಳಗೆ ಕುಳಿತಿದ್ದರು. ಅದನ್ನೂ ಲೆಕ್ಕಿಸದೇ ಪೊಲೀಸರು ಕ್ರೇನ್‌ ಮೂಲಕ ಕಾರನ್ನು ಎಳೆದೊಯ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಡಾಡಿದೆ. ಇದನ್ನೂ ಓದಿ: ಚುನಾವಣಾ ರ‍್ಯಾಲಿ ವೇಳೆ ನುಗ್ಗಿದ ಗೂಳಿ, ಸಭಿಕರು ಚೆಲ್ಲಾಪಿಲ್ಲಿ- ಬಿಜೆಪಿ ಪಿತೂರಿ ಎಂದ ರಾಜಸ್ಥಾನ ಸಿಎಂ

ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ಶರ್ಮಿಳಾ ಅವರ ಬೆಂಬಲಿಗರು ಮತ್ತು ವಾರಂಗಲ್‌ನಲ್ಲಿ ಆಡಳಿತಾರೂಢ ಟಿಆರ್‌ಎಸ್‌ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಟಿಆರ್‌ಎಸ್‌ ಬೆಂಬಲಿಗರು ತಮ್ಮ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಶರ್ಮಿಳಾ ಅವರು ಆರೋಪಿಸಿದ್ದರು. ಇದರ ಮಧ್ಯೆಯೇ ಶರ್ಮಿಳಾರನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.

ನಿನ್ನೆಯ ಘರ್ಷಣೆಯಲ್ಲಿ ಹಾನಿಗೊಳಗಾದ ಕಾರಿನ ಚಾಲಕನ ಸೀಟಿನಲ್ಲಿ ಇಂದು ಬೆಳಿಗ್ಗೆ ಅವರು ಕುಳಿತು ಶರ್ಮಿಳಾ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಹೋಗಲು ಪ್ರಯತ್ನಿಸಿದರು. ಇದನ್ನೂ ಓದಿ: ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ

ನಿನ್ನೆ ವಾರಂಗಲ್ ಜಿಲ್ಲೆಯಲ್ಲಿ ಪಾದಯಾತ್ರೆ ವೇಳೆ ಟಿಆರ್‌ಎಸ್ ಗೂಂಡಾಗಳು ತಮ್ಮ ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಶರ್ಮಿಳಾ ಅವರು ಮುಖ್ಯಮಂತ್ರಿಯವರ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಈ ವೇಳೆ ಹೈದರಾಬಾದ್ ಪೊಲೀಸರು ಅವರನ್ನು ತಡೆದು, ಎಸ್‌ಆರ್ ನಗರ ಪೊಲೀಸ್ ಠಾಣೆಗೆ ಅವರ ವಾಹನವನ್ನು ಎಳೆದೊಯ್ದರು.

ಕಳೆದ 223 ದಿನಗಳಿಂದ ನಾನು ಮತ್ತು ನನ್ನ ಪಕ್ಷದ ನಾಯಕರು, ಪ್ರತಿನಿಧಿಗಳು ತೆಲಂಗಾಣದ ವಿವಿಧ ವರ್ಗಗಳ ಜನರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಲು ಶಾಂತಿಯುತವಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಜನಪ್ರಿಯತೆಯನ್ನು ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ಬೆಂಬಲಿಗರಿಗೆ ಸಹಿಸಲಾಗಿಲ್ಲ ಎಂದು ಶರ್ಮಿಳಾ ಆರೋಪಿಸಿದ್ದಾರೆ.

ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಸಾಗುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *