ಬೀಜಿಂಗ್: ಎಲಾನ್ ಮಸ್ಕ್ ಒಡೆತನದ ಟೆಸ್ಲಾ(Tesla) ಕಂಪನಿಯೂ ಚೀನಾದಲ್ಲಿ ಉತ್ಪಾದನೆಯಾದ 80 ಸಾವಿರಕ್ಕೂ ಅಧಿಕ ಕಾರು ಹಿಂದಕ್ಕೆ ಪಡೆದಿದೆ.
ಸಾಫ್ಟ್‌ವೇರ್ ಮತ್ತು ಸೀಟ್ ಬೆಲ್ಟ್‌ನಲ್ಲಿ ದೋಷ ಇರುವ ಹಿನ್ನೆಲೆಯಲ್ಲಿ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಕಕ್ಕೆ(Chinese Market Regulator) ಟೆಸ್ಲಾ ತಿಳಿಸಿದೆ. ಇದನ್ನೂ ಓದಿ: ಗೂಗಲ್‌ನ 10 ಸಾವಿರ ಉದ್ಯೋಗಿಗಳು ಮನೆಗೆ

2013ರ ಸೆ.25 ರಿಂದ 2020 ನ.21ರವರೆಗೆ ಉತ್ಪಾದನೆಯಾದ 67,698 ಮಾಡೆಲ್ ಎಸ್, ಮಾಡೆಲ್ ಎಕ್ಸ್(Model S, Model X) ಕಾರುಗಳಲ್ಲಿ ಸಾಫ್ಟ್‌ವೇರ್ ಸಮಸ್ಯೆಯಿಂದ ಬ್ಯಾಟರಿ ನಿರ್ವಹಣೆಯಲ್ಲಿ ಸಮಸ್ಯೆ ಬರುತ್ತಿರುವ ಹಿನ್ನೆಲೆಯಲ್ಲಿ ಟೆಸ್ಲಾ ಈ ಕ್ರಮಕ್ಕೆ ಮುಂದಾಗಿದೆ. ಹಿಂದಕ್ಕೆ ಪಡೆದ ಕಾರುಗಳ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಾಗುವುದು ಎಂದು ಟೆಸ್ಲಾ ಹೇಳಿದೆ.
ಏಪ್ರಿಲ್‌ನಲ್ಲಿ ಉತ್ಪಾದನೆಯಾದ ಚೀನಾ ಮೇಡ್ ಮಾಡೆಲ್ 3 ಕಾರಿನ ಸೆಮಿಕಂಡಕ್ಟರ್‌ನಲ್ಲಿ ದೋಷ ಇರುವ ಹಿನ್ನೆಲೆಯಲ್ಲಿ ಟೆಸ್ಲಾ ಕಂಪನಿ 1,27,785 ಕಾರನ್ನು ಹಿಂದಕ್ಕೆ ಪಡೆದಿತ್ತು.
China, Tesla, Automobile, Elon musk

Leave a Reply