ರೂಪೇಶ್ ರಾಜಣ್ಣ ಸ್ವಾರ್ಥ ಬುದ್ದಿಗೆ ಶಿಕ್ಷೆ ಕೊಟ್ರು ಸುದೀಪ್‌

ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ತಮ್ಮ ಖಡಕ್ ಧ್ವನಿ, ಕನ್ನಡದ ಬಗ್ಗೆ ಇರುವ ಅಭಿಮಾನ ಹೀಗೆ ಸಾಕಷ್ಟು ವಿಷ್ಯವಾಗಿ ರೂಪೇಶ್ ರಾಜಣ್ಣ ಹೈಲೈಟ್ ಆಗಿದ್ದಾರೆ. ವೀಕೆಂಡ್ ಪಂಚಾಯಿತಿಯಲ್ಲಿ ರಾಜಣ್ಣಗೆ ಕಿಚ್ಚ ಸುದೀಪ್ ಟಾಸ್ಕ್‌ವೊಂದನ್ನ ನೀಡಿದ್ದಾರೆ. ಕಾವ್ಯಶ್ರೀಗೆ ಮನವೊಲಿಸಿ ಊಟ ಮಾಡಿಸುವ ಟಾಸ್ಕ್ ಕೊಟ್ಟಿದ್ದಾರೆ.

ಸೂಪರ್ ಸಂಡೇ ವಿತ್ ಸುದೀಪ್(Super Sunday With Sudeep) ಕಾರ್ಯಕ್ರಮದಲ್ಲಿ, ಸ್ಪರ್ಧಿಗಳಿಗೆ ಕಿಚ್ಚ ಟಾಸ್ಕ್ ಕೊಟ್ಟಿದ್ದರು. ಯಾರು ಸ್ವಾರ್ಥಿ, ಯಾರು ಹೆಚ್ಚು ಕೇರಿಂಗ್ ಎಂಬ ಟಾಸ್ಕ್‌ನಲ್ಲಿ ರೂಪೇಶ್ ರಾಜಣ್ಣ ಅತೀ ಹೆಚ್ಚು ವೋಟ್ ಪಡೆದಿದ್ದರು. ತಮ್ಮ ಅನಿಸಿಕೆಯನ್ನ ಮನೆಮಂದಿ ಈ ವೇಳೆ ಕಿಚ್ಚನ ಮುಂದೆ ಹಂಚಿಕೊಂಡಿದ್ದರು. ರಾಜಣ್ಣಗೆ ಸ್ವಾರ್ಥಿ ಪಟ್ಟ ಸಿಕ್ಕಿದ್ರೆ, ಕೇರಿಂಗ್ ವಿಷ್ಯಕ್ಕೆ ಕಾವ್ಯಶ್ರೀಗೆ ಮನೆಮಂದಿ ಮತ ಹಾಕಿದ್ದರು. ಹಾಗಾಗಿ ಸುದೀಪ್ ಮತ್ತೊಂದು ಟಾಸ್ಕ್ ಕೊಟ್ಟರು.

ರಾಜಣ್ಣ ಅವರು ಕಾವ್ಯಶ್ರೀಗೆ ಊಟ ಮಾಡಿಸಬೇಕು. ಕಾವ್ಯ ಊಟ ಮಾಡದೇ ರಾಜಣ್ಣನವರು ಊಟ ಮಾಡುವಂತಿಲ್ಲ ಎಂದು. ಅದರಂತೆ ರಾಜಣ್ಣ ಕಾವ್ಯಶ್ರೀಗೆ ಊಟ ಮಾಡಿಸಿದ್ದಾರೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಬೇರೆಯವರಿಗೆ ಊಟ ಮಾಡಿಸುತ್ತಿದ್ದೇನೆ. ಅದಕ್ಕೆ ಖುಷಿಯಾಗುತ್ತಿದೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಉದ್ಯಮಿ, Zerodha ಸಹ ಸಂಸ್ಥಾಪಕ ನಿಖಿಲ್ ಜೊತೆ ಮಾನುಷಿ ಚಿಲ್ಲರ್ ಡೇಟಿಂಗ್

ಇನ್ನೂ ಕಾವ್ಯರನ್ನ ಮಗುವಿನ ರೀತಿ ಊಟ ಮಾಡಿಸುತ್ತಿದ್ದಾರೆ. ಈ ವೇಳೆ ಕಾವ್ಯಶ್ರೀ ರಾಜಣ್ಣಗೆ ಆಟ ಆಡಿಸಿದ್ದಾರೆ. ಊಟ ಮಾಡಿಸಲು ಅವರ ಹಿಂದೆಯೇ ರೂಪೇಶ್ ಓಡಾಡಿದ್ದಾರೆ. ಇದರ ಜೊತೆಗೆ ರೂಪೇಶ್ ರಾಜಣ್ಣ ಅವರಿಗೆ ಒಂದು ದಿನ ಅಡುಗೆ ಮಾಡುವ ಟಾಸ್ಕ್ ಕೂಡ ಸುದೀಪ್ ಕೊಟ್ಟಿದ್ದಾರೆ. ರಾಜಣ್ಣ ಅಡುಗೆ ಮನೆ ಮಂದಿ ದಂಗಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *