ಕಲಬುರಗಿ: ಕಾಂಗ್ರೆಸ್ (Congress) ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಕಾಣೆಯಾಗಿದ್ದಾರೆ ಎಂದು ಬಿಜೆಪಿ (BJP) ಮುಖಂಡರು ನಗರಾದ್ಯಂತ ಪೋಸ್ಟರ್ ಅಳವಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಚಿತ್ತಾಪುರ ನಗರದ ಹಲವು ಕಡೆ ಕಾಣೆಯಾಗಿದ್ದಾರೆ, ಪೋಸ್ಟರ್ (Poster) ಅಂಟಿಸಿರುವ ಬಿಜೆಪಿ (BJP) ಮುಖಂಡರು ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಇದನ್ನೂ ಓದಿ: ಗುಂಡು ಹಾಕುವ ಮಹಿಳೆಯರ ಸಂಖ್ಯೆ ಹೆಚ್ಚಳ- ಡ್ರಂಕನ್ ಡ್ರೈವ್ ಸಮೀಕ್ಷೆ

ಕಳೆದ ಅಕ್ಟೋಬರ್ 18 ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು. ತದನಂತರ ಕ್ಷೇತ್ರಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಖರ್ಗೆ ವಿರುದ್ಧ ಗ್ರಾಮದ ಬಿಜೆಪಿ ಮುಖಂಡರು ಸಿಡಿದೆದ್ದಿದ್ದಾರೆ. ಇದನ್ನೂ ಓದಿ: `ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

ಪ್ರಿಯಾಂಕ್ ಖರ್ಗೆ ಎಲ್ಲಾದರೂ ಕಾಣಿಸಿಕೊಂಡರೆ ಕ್ಷೇತ್ರಕ್ಕೆ ಭೇಟಿ ನೀಡುವಂತೆ ತಿಳಿಸಿ ಅಂತಾ ಮನವಿ ಮಾಡಿದ್ದಾರೆ. ಬಿಜೆಪಿ ಯುವ ಮುಖಂಡ ಅರವಿಂದ್ ಚೌಹ್ಹಾಣ್ ನೇತೃತ್ವದಲ್ಲಿ ಈ ಪೋಸ್ಟರ್ ಅಳವಡಿಸಲಾಗಿದೆ.

Leave a Reply