ಇಂಡೋನೇಷ್ಯಾದಲ್ಲೂ ಕನ್ನಡದ `ಕಾಂತಾರ’ ಹೌಸ್‌ಫುಲ್ ಪ್ರದರ್ಶನ

ಚಿತ್ರರಂಗದಲ್ಲಿ ಸದ್ಯ ಹೈಪ್ ಸೃಷ್ಟಿಸಿರುವ ಚಿತ್ರ ಅಂದ್ರೆ ಕನ್ನಡದ `ಕಾಂತಾರ’ (Kantara Film) ಸಿನಿಮಾ. ಗಡಿದಾಟಿ ಸೌಂಡ್ ಮಾಡುತ್ತಿರುವ `ಕಾಂತಾರ’ ಇಂಡೋನೇಷ್ಯಾದಲ್ಲೂ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇಲ್ಲಿ ರಿಲೀಸ್ ಆಗಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಕುರಿತು ರಿಷಬ್ ಶೆಟ್ಟಿ(Rishab Shetty) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

`ಕಾಂತಾರ’ ಸಿನಿಮಾ ಗಡಿದಾಟಿ ದೇಶ ವಿದೇಶದಲ್ಲೂ ಸೌಂಡ್ ಮಾಡುತ್ತಿದೆ. ಇದೀಗ ಮೊಟ್ಟ ಮೊದಲ ಬಾರಿಗೆ ಇಂಡೋನೇಷ್ಯಾದಲ್ಲಿ ಕನ್ನಡದ ಕಾಂತಾರ ರಿಲೀಸ್ ಆಗುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಕನ್ನಡದ ಸಿನಿಮಾ ಇಲ್ಲೂ ರಿಲೀಸ್ ಆಗಬೇಕು ಎಂದು ಇಂಡೋನೇಷ್ಯಾದ ಕನ್ನಡಿಗರು ಕಾಂತಾರಗೆ ಸಾಥ್ ನೀಡಿದ್ದಾರೆ.

ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ನೋಡಿ, ಇಂಡೋನೇಷ್ಯಾದ(Indonesia) ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇಂಡೋನೇಷ್ಯಾದಲ್ಲಿ ನಾಲ್ಕು ಶೋಗಳನ್ನ ಪ್ರದರ್ಶಿಸಲಾಗಿತ್ತು. ಈ ನಾಲ್ಕು ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಈ ಚಿತ್ರಕ್ಕೆ ಅಲ್ಲಿನ ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡದ ಸಿನಿಮಾವೊಂದು ಇಂಡೋನೇಷ್ಯಾದಲ್ಲೂ ಬೀಗಬೇಕೆಂದು ಅಲ್ಲಿನ ಸುವರ್ಣ ಕನ್ನಡ ಸಂಘದವರು ರಿಷಬ್ ಸಿನಿಮಾಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್

`ಕಾಂತಾರ’ ಸಿನಿಮಾವನ್ನ ಇಂಡೋನೇಷ್ಯಾದ ಕನ್ನಡಿಗರು ನೋಡಿ ಖುಷಿಪಟ್ಟಿರೋದಕ್ಕೆ ರಿಷಬ್ ಶೆಟ್ಟಿ ಕೂಡ ಧನ್ಯವಾದ ತಿಳಿಸಿದ್ದಾರೆ. ಕನ್ನಡದ ಚಿತ್ರವನ್ನ ಅಲ್ಲೂ ಗೆಲ್ಲಿಸಿಕೊಟ್ಟಿದಕ್ಕೆ ಡಿವೈನ್ ಸ್ಟಾರ್ ರಿಷಬ್ ವೀಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]