ತಂಗಿಯ Love Marriage ಬಗ್ಗೆ ವ್ಯಂಗ್ಯವಾಡ್ತಿದ್ದ ಸ್ನೇಹಿತನನ್ನ 30 ಬಾರಿ ಇರಿದು ಕೊಂದ ಸಹೋದರ

ನವದೆಹಲಿ: ತನ್ನ ತಂಗಿಯ ಪ್ರೇಮ ವಿವಾಹದ (Love Marriage) ಬಗ್ಗೆ ವ್ಯಂಗ್ಯ ಮಾಡುತ್ತಿದ್ದ ಸ್ನೇಹಿತನನ್ನು (Friend) ಯುವತಿಯ ಸಹೋದರ 30 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯ (NewDelhi) ಜಹಾಂಗೀರ್‌ಪುರದಲ್ಲಿ ನಡೆದಿದೆ.

ಹೌದು. ದೆಹಲಿಯಲ್ಲಿ ಪೊಲೀಸರ ಕಠಿಣ ಕ್ರಮಗಳ ಹೊರತಾಗಿಯೂ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗೆಯೇ ತನ್ನ ತಂಗಿಯ ಪ್ರೇಮ ವಿವಾಹವನ್ನು ವ್ಯಂಗ್ಯ ಮಾಡಿದ್ದಕ್ಕಾಗಿ ಯುವತಿಯ ಸಹೋದರ ಚಿರಾಗ್, ರಾಹುಲ್ (30) ಎಂಬಾತನನ್ನು 30 ಬಾರಿ ಇರಿದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ

ಅಷ್ಟಕ್ಕೂ ನಡೆದಿದ್ದೇನು?
ಜಹಾಂಗೀರ್‌ಪುರದಲ್ಲಿ ವಾಸವಿದ್ದ ಚಿರಾಗ್ ತಂಗಿ ಕೆಲ ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರಾಹುಲ್ ಕೂಡ ಇದರಲ್ಲಿ ಭಾಗಿಯಾಗಿದ್ದನು. ಆದರೆ ರಾಹುಲ್ ಆಗಾಗ್ಗೆ ತನ್ನ ತಂಗಿಯ ಪ್ರೇಮ ವಿವಾಹದ ಬಗ್ಗೆ ಹೀಯಾಳಿಸುತ್ತಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಅದು ವಿಕೋಪಕ್ಕೆ ತಿರುಗಿ ಈಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಚಿರಾಗ್ 30 ಬಾರಿ ಚಾಕುವಿನಿಂದ ಇರಿದಿದ್ದ. ಅಷ್ಟರಲ್ಲಿ ಜಗಳ ಬಿಡಿಸಿದ ಸಹಚರರು ರಾಹುಲ್‌ನನ್ನು ಗಾಯಗೊಂಡ ಸ್ಥಿತಿಯಲ್ಲಿ ಬಿಜೆಆರ್‌ಎಂ ಆಸ್ಪತ್ರೆಗೆ ಕರೆದೊಯ್ದರು, ಅಷ್ಟರಲ್ಲಾಗಲೇ ರಾಹುಲ್ ಮೃತಪಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಕೇಸ್ (FIR) ದಾಖಲಿಸಿ ತನಿಖೆ ನಡೆಸುತ್ತಿರುವ ಪೊಲೀಸರು (Delhi Police), ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಪ್ರಾಪ್ತರನ್ನು ಬಂಧಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *