ದೇಶದಲ್ಲಿ ಸರ್ವರಿಗೂ ಸೌಹಾರ್ದತೆ, ಸಾಮರಸ್ಯ ಅತ್ಯಗತ್ಯ: ಯು.ಟಿ ಖಾದರ್

ರಾಯಚೂರು: ದೇಶದಲ್ಲಿ ಸರ್ವರಿಗೂ ಸೌಹಾರ್ದತೆ ಸಾಮರಸ್ಯ ಅತ್ಯಗತ್ಯ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ (U.T Khader) ಹೇಳಿದ್ದಾರೆ.

ಗಿಲ್ಲೆಸುಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಮಮಂದಿರ (Rama Mandir) ವನ್ನ ಧ್ವಂಸ ಮಾಡುವ ಬಗ್ಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ನಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ವಿಚಾರದ ಕುರಿತು ಪ್ರತಿಕ್ರಿಯಿಸಿದರು. ದೇಶದಲ್ಲಿ ಸರ್ವರಿಗೂ ಸೌಹಾರ್ದತೆ ಸಾಮರಸ್ಯ ಅತ್ಯಗತ್ಯ. ಸೌಹಾರ್ದತೆ ಸಾಮರಸ್ಯ ಇದ್ದರೆ ಮಾತ್ರ ನೆಮ್ಮದಿ ಇರುತ್ತೆ, ಬಲಿಷ್ಠ ಭಾರತ ಕಟ್ಟಲು ಸಾಧ್ಯ ಎಂದರು.

ನಕಾರಾತ್ಮಕ ಚಿಂತನೆಗೆ, ಶಾಂತಿ ಕದಡುವಂತದನ್ನ ಸರ್ಕಾರ ತನಿಖೆ ಮಾಡಿ ನೈಜವಾಗಿವಾಗಿ ತಪ್ಪಾಗಿದ್ದರೆ ಕ್ರಮಕೈಗೊಳ್ಳಬೇಕು. ಸೌಹಾರ್ದತೆ ಸಾಮರಸ್ಯ ಹಾಳುಮಾಡುವಂತ ದ್ವೇಷ ಬಿತ್ತುವ ಅವಕಾಶ ಯಾವುದೇ ಸಂಘಟನೆಗೆ ಕೊಡಬಾರದು. ಇಂತಹದ್ದಕ್ಕೆ ಸರ್ಕಾರ ಸರಿಯಾದ ಕ್ರಮವನ್ನ ತೆಗೆದುಕೊಳ್ಳಲೇಬೇಕು ಅದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಆಯೋಧ್ಯೆ ತೀರ್ಪು ವಿರೋಧಿಸಿ, ಗಲಾಟೆಗೆ ಕರಪತ್ರ ಹಂಚಿಕೆ – PFI ಸಂಘಟನೆಯ ಕುತಂತ್ರ ಮತ್ತಷ್ಟು ಬಯಲು

ತಾರತಮ್ಯ ಇಲ್ಲದ ತನಿಖೆಯಾಗಲಿ. ತನಿಖಾ ಸಂಸ್ಥೆಗಳಿಗೂ ಎಲ್ಲಾ ಗೊತ್ತಿದೆ, ನಿರಪರಾಧಿಗಳಿಗೆ ಅನ್ಯಾಯ ವಾಗದಿರಲಿ. ತಪ್ಪು ಮಾಡಿದವರ ವಿರುದ್ದ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *