ಸಿಸೋಡಿಯಾಗೆ CBI ಸಮನ್ಸ್ – ಬಂಧಿಸುವ ಹುನ್ನಾರ ನಡೆದಿದೆ: AAP ಆರೋಪ

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ (Delhi) ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಕೇಂದ್ರೀಯ ತನಿಖಾ ಸಂಸ್ಥೆ (CBI) ವಿಚಾರಣೆಗೆ ಕರೆಸಿದೆ. ಸಮನ್ಸ್ ಬಳಿಕ ಆಮ್ ಆದ್ಮಿ ಪಕ್ಷ (AAP), ಸಿಸೋಡಿಯಾ ಅವರನ್ನು ಬಂಧಿಸಲು ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದೆ.

MANISH SISODIA

ಸಮನ್ಸ್ ಬಳಿಕ ಮಾತನಾಡಿದ ಆಪ್ ಹಿರಿಯ ನಾಯಕ ಸೌರಭ್ ಭಾರದ್ವಾಜ್ (Saurabh Bhardwaj), ಸಿಸೋಡಿಯಾ ಅವರಿಗೆ ಸಮನ್ಸ್ ನೀಡಿರುವುದರ ಹಿಂದೆ ಬಿಜೆಪಿ (BJP) ಹಾಗೂ ಆಪ್ ಪಕ್ಷ ನೇರ ಸ್ಪರ್ಧೆಯಲ್ಲಿರುವ ಗುಜರಾತ್ ಚುನಾವಣೆಗೆ (Gujarat elections) ಸಂಬಂಧವಿದೆ. ಈ ಬಗ್ಗೆ ಬಿಜೆಪಿ ಭಯ ಪಟ್ಟಿದೆ. ಇದಕ್ಕಾಗಿ ಸಿಸೋಡಿಯಾ ಅವರನ್ನು ಬಂಧಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ಸಿಬಿಐ ಸಮನ್ಸ್ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ, ಸಿಬಿಐ ನನ್ನ ಮನೆ ಮೇಲೆ 14 ಗಂಟೆಗಳ ಕಾಲ ದಾಳಿ ನಡೆಸಿತ್ತು. ನನ್ನ ಬ್ಯಾಂಕ್ ಲಾಕರ್ ಅನ್ನು ಕೂಡಾ ತೆರೆದು ಹುಡುಕಿದ್ದರು. ಆದರೆ ಎಲ್ಲೂ ಏನೂ ಅವರಿಗೆ ಸಿಕ್ಕಿರಲಿಲ್ಲ. ಈಗ ಅವರು ನಾಳೆ ಬೆಳಗ್ಗೆ ನನ್ನನ್ನು 11 ಗಂಟೆಗೆ ಸಿಬಿಐ ಕಚೇರಿಗೆ ಕರೆದಿದ್ದಾರೆ. ನಾನು ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯುತ್ತೇವೆ ಎಂದ ಹೋರಾಟಗಾರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ತಮ್ಮ ಉಪನಾಯಕನಿಗೆ ಸಮನ್ಸ್ ನೀಡಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ, ಕೋಟ್ಯಂತರ ಬಡವರ ಪ್ರಾರ್ಥನೆ ನಿಮ್ಮೊಂದಿಗಿದೆ. ಜೈಲಿನ ಕಂಬಿಗಳು ಮತ್ತು ಗಲ್ಲು ಶಿಕ್ಷೆ ಭಗತ್ ಸಿಂಗ್ ಅವರ ದೃಢ ಉದ್ದೇಶವನ್ನು ತಡೆಯಲಿಲ್ಲ. ಇದು ನಮ್ಮ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸುತ್ತಿದೆ. 75 ವರ್ಷಗಳ ಬಳಿಕ ದೇಶ ಉತ್ತಮ ಶಿಕ್ಷಣ ಸಚಿವರನ್ನು ಪಡೆದಿದ್ದು, ಬಡವರಿಗೆ ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ನೀಡುತ್ತಿದೆ ಎಂದು ಸಿಸೋಡಿಯಾ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ರಾಯಚೂರು ಏಮ್ಸ್ ಹೋರಾಟಗಾರರಿಂದ ಶಾಸಕನ ಮನೆಗೆ ಮುತ್ತಿಗೆ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *