ತಿರುವನಂತರಪುರಂ: ಕೇರಳದ (Kerala) ಕೋಝಿಕೋಡ್ನಲ್ಲಿ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು (Student) ಹಿಜಬ್ (Hijab) ಧರಿಸಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿ ಪ್ರವೇಶ ನಿರಾಕರಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಕುಟುಂಬಸ್ಥರು ಮುಸ್ಲಿಂ ಸಂಘಟನೆಗಳ (Islamic Organisation) ವ್ಯಾಪಕ ಪ್ರತಿಭಟನೆಯ ನಂತರ ವಿದ್ಯಾರ್ಥಿನಿಯನ್ನು ಶಾಲೆಯಿಂದಲೇ ಬಿಡಿಸಿದ್ದಾರೆ.

ಕೋಝಿಕೋಡ್ನಲ್ಲಿರುವ ಪ್ರಾವಿಡೆನ್ಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದ್ದರಿಂದ ಇಸ್ಲಾಮಿಕ್ ಆರ್ಗನೈಜೇಷನ್ಸ್ ಅಫ್ ಇಂಡಿಯಾ (SIO) ಹಾಗೂ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಷನ್ (MSF) ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿವೆ. ಈ ವಿಷಯವನ್ನು ಶಾಲಾ ಆಡಳಿತಾಧಿಕಾರಿಗಳು ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಕುಟುಂಬಸ್ಥರು ಸಂವಿಧಾನ (Constitution) ವಿರೋಧಿ ಹೆಜ್ಜೆ ಇಟ್ಟಿರುವ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವೇ (Education) ಬೇಡವೆಂದು ಶಾಲೆಯಿಂದ ಬಿಡಿಸಿದ್ದಾರೆ. ಇದನ್ನೂ ಓದಿ: ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

ಇರಾನ್ ಹಿಜಬ್ ಧರಿಸಿದ್ದಕ್ಕೆ ಪೊಲೀಸರಿಂದ (Iran Police) ಥಳಿತಕ್ಕೊಳಗಾಗಿ ಕೋಮಾ ಸ್ಥಿತಿಗೆ ತಲುಪಿ ಮೃತಪಟ್ಟ ನಂತರ ಅಲ್ಲಿ ಜನ ಹಿಂಸಾತ್ಮಕ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಭದ್ರತಾ ಪಡೆಗಳ ಜೊತೆಗಿನ ಕಾದಾಟದಲ್ಲಿ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 700ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

Leave a Reply