ಧಾರವಾಡ: ಬ್ರಿಟಿಷರು ಇದ್ದಾಗಲೇ ಗಣೇಶೋತ್ಸವಕ್ಕೆ ಅಡ್ಡಿ ಇರಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಗಣೇಶೋತ್ಸವ ಆಚರಣೆಗೆ ಪರದಾಡುವಂತಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸುಪ್ರೀಂ ಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಲೇಬೇಕು. ಆದರೆ ಸಮಸ್ಯೆ ಹಾಗೆಯೇ ಉಳಿಯಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಥಾಸ್ಥಿತಿ ಕಾಪಾಡಿ – ಈದ್ಗಾ ಮೈದಾನದಲ್ಲಿ ಗಣೋಶೋತ್ಸವ ಆಚರಣೆ ಇಲ್ಲ

ಸುಪ್ರೀಂ ಕೋರ್ಟ್‌ನಲ್ಲಿ ದಾರಿ ತಪ್ಪಿಸುವ ವಾದಗಳು ನಡೆದಿವೆ. ವಕ್ಫ್ ಬೋರ್ಡ್ ಪಾರ್ಟಿಯಾಗೇ ಇರಲಿಲ್ಲ. ಅದರೆ ಏಕಾಏಕಿ ವಕ್ಫ್ ಬೋರ್ಡ್ ಪ್ರವೇಶವಾಗಿದೆ. ವಕ್ಫ್ ಬೋರ್ಡ್ ಅಧ್ಯಕ್ಷ 3 ದಿನಗಳಿಂದ ದೆಹಲಿಗೆ ಹೋಗಿ ಕೂತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಗಣೇಶನ ವಿರೋಧಿಗಳ ರೀತಿ ವರ್ತಿಸಬಾರದು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಇರಾಕ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಗುಂಡಿನ ದಾಳಿಗೆ 23 ಮಂದಿ ಸಾವು, 300 ಜನರಿಗೆ ಗಾಯ

ಕಾಂಗ್ರೆಸ್ ಹಾಗೂ ವಕ್ಫ್ ಬೋರ್ಡಿನಿಂದ ಗಣೇಶೋತ್ಸವಕ್ಕೆ ಅಡ್ಡಿಯಾಗುತ್ತಿದೆ. ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ಹೋಗಿ ಅಂತ ಹೇಳಿರುವುದರಿಂದ ಸರ್ಕಾರವೇ ಹೈಕೋರ್ಟ್ ಮೂಲಕ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply