ಬೆಂಗಳೂರು: ಭಾರೀ ವಿವಾದ ಎಬ್ಬಿಸಿದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಲು ರಾಜ್ಯ ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೇ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಖಜಾಂಚಿ ಯಶವಂತ್ ಕಣ್ಣೀರಿಟ್ಟಿದ್ದಾರೆ.

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ. ಸೆ.23ಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ. ಮುಂದಿನ ದಿನಗಳಲ್ಲಿ ನಮಗೆ ಜಯ ಸಿಗುತ್ತೆ ಅನ್ನೋ ಭರವಸೆಯಿದೆ. ಗಣೇಶೋತ್ಸವಕ್ಕೆ ಅವಕಾಶ ಸಿಗುತ್ತೆ ಅಂದುಕೊಂಡಿದ್ದೆವು. ನಾವು ಇದುವರೆಗೂ ಮುಸ್ಲಿಮರಿಗೆ ತೊಂದರೆ ಕೊಟ್ಟಿಲ್ಲ. ಆದರೆ ನಮ್ಮ ಗಣೇಶೋತ್ಸವಕ್ಕೆ ಯಾಕೆ ಇಷ್ಟೊಂದು ತೊಂದರೆ ಕೊಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕಿಲ್ಲ ಅವಕಾಶ – ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶ

ಗಲಭೆ ಎಬ್ಬಿಸೋಕೆ ಅವರೇ ಹೀಗೆ ಮಾಡುತ್ತಿದ್ದಾರೆ. ಅವರು ಹಬ್ಬ ಮಾಡಿದಾಗ ನಾವು ಏನಾದ್ರೂ ತೊಂದರೆ ಮಾಡಿದ್ವಾ..? ನಮ್ಮ ಆಚರಣೆಗಳಿಗೆ ಯಾಕೆ ತೊಂದ್ರೆ ಕೊಡುತ್ತಿದ್ದಾರೆ. ದಾಖಲೆಗಳಿಲ್ಲದಿದ್ದರೂ ವಕ್ಫ್ ಬೋರ್ಡ್ ಮತ್ತೆ ಕೇಸ್ ಹಾಕಿದ್ದಾರೆ. ನಮಗೆ ಜಯ ಸಿಕ್ಕೇ ಸಿಗುತ್ತೆ. ಮೈದಾನ ವಿಚಾರವಾಗಿ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಕಣ್ಣೀರಿಟ್ಟರು.

Leave a Reply