ಮುಂಬೈ: ಮಹಾರಾಷ್ಟ್ರದ ಜಲ್ನಾದಲ್ಲಿ ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಎರಡು ಉದ್ಯಮ ಗುಂಪುಗಳ ಮೇಲೆ ಆಗಸ್ಟ್ 1 ಮತ್ತು 8ರ ನಡುವೆ ಆದಾಯ ತೆರಿಗೆ ನಡೆಸಿದ ದಾಳಿಯಲ್ಲಿ 390 ಕೋಟಿ ರೂ. ಮೊತ್ತದ ಬೇನಾಮಿ ಆಸ್ತಿ ಪತ್ತೆಯಾಗಿದ್ದು, ಇದೀಗ ಅದನ್ನು ವಶಪಡಿಸಿಕೊಳ್ಳಲಾಗಿದೆ.

ನಾಸಿಕ್ ವಿಭಾಗದ ಆದಾಯ ತೆರಿಗೆ ಇಲಾಖೆಯು ಆಗಸ್ಟ್ ಮೊದಲ ವಾರದಲ್ಲಿ ಜಲ್ನಾ ಮತ್ತು ಔರಂಗಾಬಾದ್ ನಗರಗಳಲ್ಲಿರುವ ಉಕ್ಕು ತಯಾರಿಕರ ಕಾರ್ಖಾನೆಗಳು, ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 390 ಕೋಟಿ ಮೌಲ್ಯದ ಲೆಕ್ಕವಿರದಷ್ಟು ಆಸ್ತಿ ಪತ್ತೆ ಮಾಡಿದೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

ಈ ದಾಳಿಯಲ್ಲಿ ಸುಮಾರು 58 ಕೋಟಿ ರೂಪಾಯಿ ನಗದು, 32 ಕೆಜಿ ಚಿನ್ನ ಸೇರಿದಂತೆ, 14 ಕೋಟಿ ರೂ. ಮೌಲ್ಯದ ಮುತ್ತುಗಳು ಮತ್ತು ವಜ್ರಗಳು ಹೀಗೆ ಒಟ್ಟು 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, ದಾಳಿಯ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವು ಆಸ್ತಿ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿದೆ ಮತ್ತು ಇವುಗಳ ಪರಿಶೀಲನೆ ನಡೆಸಲಾಗುತ್ತಿದೆ.
ವಶಪಡಿಸಿಕೊಂಡ ಹಣವನ್ನು ಎಣಿಸಲು ಇಲಾಖೆ 13 ಗಂಟೆಗಳ ಸಮಯ ತೆಗೆದುಕೊಂಡಿತು. ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆ ನಡೆಸಲು ವಿವಿಧ ರಾಜ್ಯಗಳ 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು. ಇದನ್ನೂ ಓದಿ: ಮೋದಿಜಿಯವರ ಡಿಜಿಟಲ್ ಇಂಡಿಯಾ ಎಫೆಕ್ಟ್ – ರಾಜ್ಯದ ಪರೀಕ್ಷೆಗಳಲ್ಲಿ ಬ್ಲೂಟೂತ್, ಸ್ಮಾರ್ಟ್ ವಾಚ್‍ಗಳದ್ದೇ ಕಾರುಬಾರು: ಕಾಂಗ್ರೆಸ್

Leave a Reply