725.7 ಕೋಟಿ ಡೀಲ್‌ – ಗುಜರಾತ್‌ನ ಫೋರ್ಡ್‌ ಘಟಕ ಖರೀದಿಸಿದ ಟಾಟಾ

ಮುಂಬೈ: ಟಾಟಾ ಮೋಟಾರ್ಸ್‌ ಗುಜರಾತಿನಲ್ಲಿರುವ ಫೋರ್ಡ್‌ ಕಂಪನಿಯ ಉತ್ಪದನಾ ಘಟಕವನ್ನು 725.7 ಕೋಟಿ ರೂ. ನೀಡಿ ಖರೀದಿಸಿದೆ.

ಟಾಟಾ ಮೋಟಾರ್ಸ್‌ನ ಅಂಗಸ್ಥೆಯಾದ ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟಿಡ್‌(ಟಿಪಿಇಎಂಎಲ್‌) ಸನಂದ್‌ನಲ್ಲಿರುವ ಘಟಕವನ್ನು ಖರೀದಿಸಿದೆ ಎಂದು ಟಾಟಾ ಮೋಟಾರ್ಸ್‌ ಮಾಧ್ಯಮ ಹೇಳಿಕೆಯ ಮೂಲಕ ತಿಳಿಸಿದೆ.

ಭಾನುವಾರ ಎರಡು ಕಂಪನಿಗಳು ಪರಸ್ಪರ ಸಹಿ ಹಾಕಿಕೊಂಡಿದ್ದು ಒಪ್ಪಂದದ ಪ್ರಕಾರ ಅರ್ಹ ಫೋರ್ಡ್‌ ಉದ್ಯೋಗಿಗಳಿಗೆ ಟಾಟಾ ಕಂಪನಿ ಉದ್ಯೋಗ ನೀಡಲಿದೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ, ಸ್ವಾತಂತ್ರ್ಯೋತ್ಸವ ಅದ್ಧೂರಿಯಾಗಿ ಆಚರಿಸುತ್ತೇವೆ: ಜಮೀರ್

ಫೋರ್ಡ್‌ ಇಂಡಿಯಾದ ಬಿಡಿ ಭಾಗಗಳ ಜೋಡಣಾ ಘಟಕ 350 ಎಕ್ರೆಯಲ್ಲಿ ವಿಸ್ತಾರಗೊಂಡಿದ್ದರೆ 110 ಎಕ್ರೆ ಜಾಗದಲ್ಲಿ ಎಂಜಿನ್‌ ಉತ್ಪದನಾ ಘಟಕವನ್ನು ಹೊಂದಿದೆ. ಘಟಕ 3,043 ನೇರ ಉದ್ಯೋಗ, 20 ಸಾವಿರ ಮಂದಿಗೆ ಪರೋಕ್ಷ ಉದ್ಯೋಗ ನೀಡುತ್ತಿದೆ.

ಟಾಟಾ ಮೋಟಾರ್ಸ್‌ ಪ್ರಸ್ತುತ ಪ್ರತಿ ವರ್ಷ 3 ಲಕ್ಷ ಯೂನಿಟ್‌ ಉತ್ಪಾದನಾ ಮಾಡುವ ಸಾಮರ್ಥವನ್ನು ಹೊಂದಿದೆ. ಈ ಘಟಕ ಖರೀದಿಯಿಂದ ಪ್ರತಿ ವರ್ಷ ಉತ್ಪಾದನೆ ಮಾಡುವ ಯೂನಿಟ್‌ಗಳ ಸಂಖ್ಯೆ 4.20 ಲಕ್ಷಕ್ಕೆ ಏರಲಿದೆ.

ಅಮೆರಿಕ ಮೂಲದ ಫೋರ್ಡ್‌ ಗುಣಮಟ್ಟದ ಕಾರುಗಳಿಗೆ ಹೆಸರುವಾಸಿ. ಭಾರತದಲ್ಲಿ ಕಡಿಮೆ ಬೆಲೆಯ ಮಧ್ಯಮ ಬಜೆಟ್‌ ಕಾರುಗಳು ಜನಪ್ರಿಯವಾಗುತ್ತಿದ್ದಂತೆ ಫೋರ್ಡ್‌ ಕಂಪನಿಯೂ ಕಡಿಮೆ ಬೆಲೆ ಕಾರುಗಳನ್ನು ಬಿಡುಗಡೆ ಮಾಡಿತ್ತು. ಆದರೆ ಮಾರುಕಟ್ಟೆಯಲ್ಲಿ ಯಶಸ್ಸು ಕಾಣದ ಕಾರಣ ನಷ್ಟವನ್ನು ಅನುಭವಿಸತೊಡಗಿತು. ಸದ್ಯ ಚೆನ್ನೈನಲ್ಲಿ ಫೋರ್ಡ್‌ ಕಂಪನಿಯ ಘಟಕವಿದ್ದು 2022ರಲ್ಲಿ ಈ ಘಟಕವನ್ನೂ ಬಂದ್‌ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *