ನಯನತಾರಾ ದಂಪತಿಯನ್ನು ಭೇಟಿಯಾದ ಮಲೈಕಾ ಅರೋರಾ: ಫೋಟೋ ವೈರಲ್

ಕಾಲಿವುಡ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. `ಜವಾನ್’ ಸಿನಿಮಾದ ಚಿತ್ರೀಕರಣದಲ್ಲಿ ನಯನತಾರಾ ಬ್ಯುಸಿಯಾಗಿದ್ದಾರೆ. ಮುಂಬೈನ ಖಾಸಗಿ ರೆಸ್ಟೋರೆಂಟ್‌ವೊಂದರಲ್ಲಿ ಮಲೈಕಾ ಅರೋರಾ ಅವರನ್ನ ಭೇಟಿಯಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಅಚಾನಕ್ ಆಗಿ ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ನವದಂಪತಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರನ್ನ ಭೇಟಿಯಾಗಿದ್ದಾರೆ. ಈ ವೇಳೆ ನವದಂಪತಿಗೆ ಹೊಸ ಬಾಳಿಗೆ ಮಲೈಕಾ ಶುಭಹಾರೈಸಿದ್ದಾರೆ. ಈ ಕ್ಷಣದ ಫೋಟೋವನ್ನ ಕ್ಲಿಕ್ಕಿಸಿಕೊಂಡು ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಶುಭಹಾರೈಸಿದ್ದಾರೆ. ಈ ಭೇಟಿ ಖುಷಿ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ. ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ತೆಲುಗು ನಟ ತ್ರಿಗುಣ್ ಪಾದಾರ್ಪಣೆ

ಸದ್ಯ ನಯನತಾರಾ, `ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಟ್ಲಿ ನಿರ್ದೇಶನದಲ್ಲಿ ಸಿನಿಮಾ ಭರದಿಂದ ಚಿತ್ರೀಕರಣ ಸಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *