ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಪ್ರಮುಖ ಹಂತಕ ಮಹಾಂತೇಶ್ ಶಿರೂರು ಇತ್ತೀಚೆಗಷ್ಟೇ ತನ್ನ ಫೇಸ್ಬುಕ್ನಲ್ಲಿ ಫೋಸ್ಟ್ ಮಾಡಿದ್ದ ಭಗವದ್ಗೀತೆ ಗೀತೋಪದೇಶದ ಸಾಲಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡುವ ಮುನ್ನ ಐದು ದಿನದ ಹಿಂದೆ ಹಂತಕ ಮಹಾಂತೇಶ್, ಶ್ರೀ ಕೃಷ್ಣ ಪರಮಾತ್ಮನ ರೌದ್ರಾವತಾರದಲ್ಲಿ ಕುದುರೆ ಏರಿ ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾನೆ. ಅಲ್ಲದೇ ಈ ಫೋಟೋದಲ್ಲಿ ಅಧರ್ಮ ತಾಂಡವವಾಡುತ್ತಿರುವಾಗ ದುಷ್ಟರ ನಾಶ ಪಡಿಸಲು ಧರ್ಮ ಪುನರ್ ಸ್ಥಾಪಿಸಲು ನೀನು ಬರುವೆ ಎಂದು ವಚನ ನೀಡಿರುವೆ. ವಿಳಂಭವೇಕೆ ಮತ್ತೆ ಅವತರಿಸು ಪ್ರಭುವೆ..! ಸಂಭವಾಮಿ ಯುಗೇ ಯುಗೇ ಎಂಬ ಭಗವದ್ಗೀತೆಯ ಗೀತೋಪದೇಶದ ಸಾಲುಗಳಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಸರಳವಾಸ್ತು ಗುರೂಜಿ ಹೆಸರು ಹೇಳಿ ಆಸ್ತಿ ಮಾಡಲು ಮುಂದಾಗಿದ್ದ ಹಂತಕರು
ಸರಳವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಉಣಕಲ್ನಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಹಾಡಹಗಲೇ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರವೇ ಬಂಧಿಸಿದ್ದು, ಈ ಸಂಬಂಧ ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್ – ಗುರೂಜಿಗೆ ಬ್ಲ್ಯಾಕ್ಮೇಲ್ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು

Leave a Reply