ಸಮಾಜವಾದಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ ಅಖಿಲೇಶ್ ಯಾದವ್

ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಯುವ ಹಾಗೂ ಮಹಿಳಾ ವಿಭಾಗ ಸೇರಿದಂತೆ ಎಲ್ಲ ಘಟಕಗಳ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಘಗಳನ್ನು ವಿಸರ್ಜಿಸಿದ್ದಾರೆ.

ಈ ನಿರ್ಧಾರಕ್ಕೆ ಯಾವುದೇ ಅಧಿಕೃತ ಕಾರಣಗಳನ್ನು ಈವರೆಗೆ ನೀಡಿಲ್ಲ. ಆದರೆ ಪಕ್ಷದ ಭದ್ರಕೋಟೆಗಳಾದ ರಾಂಪುರ ಮತ್ತು ಅಜಂಗಢದಲ್ಲಿ ಲೋಕಸಭೆ ಉಪಚುನಾವಣೆ ಸೋಲಿನ ನಂತರ ಸಮಾಜವಾದಿ ಪಕ್ಷವನ್ನು ಪುನಃ ಕಟ್ಟಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಅಧ್ಯಕ್ಷ ನರೇಶ್ ಉತ್ತಮ್ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಪಕ್ಷ ಹೇಳಿದೆ. ಈ ಬಗ್ಗೆ ಸಮಾಜವಾದಿ ಪಕ್ಷ ಟ್ವಿಟ್ಟರ್‌ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪಕ್ಷದ ರಾಜ್ಯಾಧ್ಯಕ್ಷರನ್ನು ಹೊರತುಪಡಿಸಿ, ಪಕ್ಷದ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಘಟಕಗಳನ್ನು ವಿಸರ್ಜಿಸಿದ್ದಾರೆ ಎಂದು ತಿಳಿಸಿದೆ.

ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು, ಯುವಜನ, ಮಹಿಳಾ ಘಟಕ ಸೇರಿದಂತೆ ಪಕ್ಷದ ಎಲ್ಲ ಸಂಘಟನೆಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?

2024ರ ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷವು ಸಜ್ಜಾಗುತ್ತಿದ್ದು, ಬಿಜೆಪಿಯನ್ನು ಸಂಪೂರ್ಣ ಬಲದಿಂದ ಎದುರಿಸಲು ಸಂಘಟನೆಯನ್ನು ಬಲಪಡಿಸುವತ್ತ ಗಮನ ಹರಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಮಾತಾಡುವ ರಾಷ್ಟ್ರಪತಿ ಬೇಕು; ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡ್ತೀನಿ – ಯಶವಂತ್‌ ಸಿನ್ಹಾ

Live Tv

Comments

Leave a Reply

Your email address will not be published. Required fields are marked *