ಗರ್ಭಪಾತ ಮಾತ್ರೆ ಸೇವಿಸಿ ಬಾಲಕಿ ಸಾವು – ಬಾಯ್‍ಫ್ರೆಂಡ್ ಅರೆಸ್ಟ್

ಚೆನ್ನೈ: ಗರ್ಭಪಾತ ಮಾತ್ರೆ ಸೇವಿಸಿ 15 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ನಡೆದಿದೆ.

ಮೃತ ಬಾಲಕಿ ಮುರುಗನ್ ಎಂಬಾತನಿಂದ ಗರ್ಭ ಧರಿಸಿದ್ದಳು. ಬಾಲಕಿಯನ್ನು ಪ್ರತಿನಿತ್ಯ ಮುರುಗನ್ ಶಾಲೆಗೆ ಡ್ರಾಪ್ ಮಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಸಂಬಂಧ ಬೆಳೆದಿದೆ. ಇತ್ತೀಚೆಗಷ್ಟೇ ಬಾಲಕಿ ಗರ್ಭಿಣಿಯಾಗಿದ್ದು, ಈ ವಿಚಾರವನ್ನು ಮುರುಗನ್‍ಗೆ ತಿಳಿಸಿದ್ದಾಳೆ. ನಂತರ ಮುರುಗನ್ ಸ್ನೇಹಿತ ಪ್ರಭು(27) ಗರ್ಭಪಾತ ಮಾತ್ರೆ ಸೇವಿಸುವಂತೆ ಸಲಹೆ ನೀಡಿದ್ದನು. ಹೀಗಾಗಿ ಮುರುಗನ್ ಗರ್ಭಪಾತ ಮಾತ್ರೆ ಖರೀದಿಸಿ, ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಕಿಯನ್ನು ಆಕೆಯ ಮನೆಯಿಂದ ಕರೆತಂದು ದಾರಿ ಮಧ್ಯೆ ಗರ್ಭಪಾತದ ಮಾತ್ರೆ ಸೇವಿಸುವಂತೆ ನುಂಗಿಸಿದ್ದಾನೆ.

crime

ಇಬ್ಬರು ಬಾಲಕಿಯರೊಂದಿಗೆ ಶಾಲೆಯೊಳಗೆ ಹೋಗುವಾಗ, ಬಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಮುರುಗನ್ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ದುರದೃಷ್ಟವಶಾತ್, ವೈದ್ಯರು ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ನಂತರ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವನಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಇದನ್ನೂ ಓದಿ: 4 ರಾಜ್ಯಗಳಲ್ಲಿ 9 ಎಫ್‌ಐಆರ್ – ಬಿಜೆಪಿ ಮಾಜಿ ವಕ್ತಾರೆ ನೂಪುರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?

ಇದೀಗ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಮುರುಗನ್ ಹಾಗೂ ಆತನ ಸ್ನೇಹಿತ ಪ್ರಭು ಅನ್ನು ಬಂಧಿಸಿದ್ದಾರೆ. ಅಲ್ಲದೇ ಮುರುಗನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಗರ್ಭಪಾತದ ಮಾತ್ರೆ ನೀಡಿದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಾಲಕ್ಕೆ ತಿಂಡಿ ನೀಡಲು ನಿರಾಕರಣೆ – ಮಾಲೀಕ ಸೇರಿದಂತೆ 7 ಮಂದಿ ಮೇಲೆ ಆ್ಯಸಿಡ್ ದಾಳಿ

Live Tv

Comments

Leave a Reply

Your email address will not be published. Required fields are marked *