ಇಷ್ಟಕ್ಕೆಲ್ಲಾ ಹೊಣೆ ನೂಪುರ್ ಅಲ್ಲ – ಗಲಭೆಗೆ ಇಬ್ಬರು ಕಾರಣ ಎಂದ ರಾಹುಲ್ ಗಾಂಧಿ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ, ಕೋಮು ಗಲಭೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೂಪುರ್ ಶರ್ಮಾ ವಿವಾದದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಉದ್ಭವವಾಗಿರುವ ಆಕ್ರೋಶಕ್ಕೆ ಕಾರಣ ಪ್ರವಾದಿ ಮೊಹಮ್ಮದ್ ಬಗ್ಗೆ ಕಾಮೆಂಟ್ ಮಾಡಿದ ವ್ಯಕ್ತಿ ಅಲ್ಲ. ಇದಕ್ಕೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಹೊಸದಾಗಿ ಗೆದ್ದವರ ಕ್ಷೇತ್ರಗಳು ಡೇಂಜರ್ – ಬಿಜೆಪಿ ಇಂಟರ್ನಲ್ ರಿಪೋರ್ಟ್ ಔಟ್‌

ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ಸುಪ್ರೀಂ ಕೋರ್ಟ್ ಹೇಳಿರುವುದು ನಿಜ. ಆದರೆ ದೇಶದ ಉದ್ವಿಗ್ನ ಪರಿಸ್ಥಿತಿಗೆ ಸಂಪೂರ್ಣ ಹೊಣೆ ನೂಪುರ್ ಶರ್ಮಾ ಅಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ದೇಶದಲ್ಲಿ ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದರು. ಇದನ್ನೂ ಓದಿ: ಮಂತ್ರಿ ಆಗ್ಬೇಕು ಅನ್ನೋರು ಸಿಎಂ ಮನೆಗೆ ಅಡ್ಡಾಡಬೇಕು: ಸ್ವಪಕ್ಷದ ವಿರುದ್ಧ ಯತ್ನಾಳ್ ಮತ್ತೆ ಅಸಮಾಧಾನ

ಬಿಜೆಪಿ ಹಾಗೂ ಆರ್‌ಎಸ್‌ಎಸ್ ದೇಶದ ಜನರ ನಡುವೆ ವಿಭಜನೆಯನ್ನು ಸೃಷ್ಟಿಸುತ್ತಿದೆ. ಆದರೆ ಕಾಂಗ್ರೆಸ್ ಸಮುದಾಯಗಳ ನಡುವೆ ಸೇತುವೆಗಳನ್ನು ನಿರ್ಮಿಸುತ್ತಿದೆ ಹಾಗೂ ಜನರನ್ನು ಒಟ್ಟುಗೂಡಿಸುತ್ತಿದೆ ಎಂದರು.

ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ದೇಶಾದ್ಯಂತ ನೂಪುರ್ ವಿರುದ್ಧ ಟೀಕೆಗಳು ಗ್ರಾಸವಾಗುತ್ತಿದ್ದು, ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತಿವೆ.

Live Tv

Comments

Leave a Reply

Your email address will not be published. Required fields are marked *