ಉದಯಪುರ ಟೈಲರ್‌ ಹತ್ಯೆ ಖಂಡಿಸಿ ರಾಜ್ಯದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ

ಬೆಂಗಳೂರು: ಉದಯಪುರ ಟೈಲರ್‌ ಕನ್ಹಯ್ಯಲಾಲ್‌ ಹತ್ಯೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹತ್ಯೆ ಖಂಡಿಸಿ ರಾಜ್ಯದ ಹಲವು ಕಡೆ ʼನನ್ನ ಕತ್ತು ಸೀಳಬೇಡಿʼ ಎಂಬ ಅಭಿಯಾನ ನಡೆಯುತ್ತಿದೆ.

ಹೌದು, ಕನ್ಹಯ್ಯಲಾಲ್‌ ಹತ್ಯೆ ವಿರೋಧಿಸಿ ರಾಜ್ಯದಲ್ಲಿ ʼನನ್ನ ಕತ್ತು ಸೀಳಬೇಡಿʼ ಅಭಿಯಾನ ಶುರುವಾಗಿದೆ. ನಂಜನಗೂಡು ವ್ಯಾಪಾರಿಗಳು ವಿಭಿನ್ನ ಅಭಿಯಾನ ನಡೆಸುತ್ತಿದ್ದಾರೆ. ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಸಾಥ್‌ ನೀಡಿವೆ. ಇದನ್ನೂ ಓದಿ: ನನ್ನ ಪತಿಯನ್ನು ಕೊಂದವರನ್ನು ಗಲ್ಲಿಗೇರಿಸಿ: ಉದಯಪುರ ಟೈಲರ್‌ ಪತ್ನಿ ಒತ್ತಾಯ

ʼನಾನು ಸತ್ಯ ಹೇಳಲ್ಲ, ಹೇಳಿದವರ ಪರ ನಿಲ್ಲುವುದೂ ಇಲ್ಲ. ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತನ್ನು ಸೀಳಬೇಡಿʼ ಎಂದು ಬರೆದಿರುವ ಪೋಸ್ಟರ್‌ ಹಿಡಿದು ಹಲವರು ಟೈಲರ್‌ ಹತ್ಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ತರಕಾರಿ, ದಿನಸಿ, ಬೇಕರಿ ತಿನಿಸು ವ್ಯಾಪಾರಿಗಳು, ಹೂ ಮಾರಾಟಗಾರರು ಈ ಅಭಿಯಾನ ಆರಂಭಿಸಿದ್ದಾರೆ. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇದನ್ನೂ ಓದಿ: ಉದಯ್‌ಪುರ ಬರ್ಬರ ಹತ್ಯೆ ಎನ್‌ಐಎ ಹೆಗಲಿಗೆ – ಪಾತಕಿಗಳಿಗೆ ಐಸಿಸ್‌ ಲಿಂಕ್‌?

ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆ ಆರಂಭವಾಗಿದೆ.

Live Tv

Comments

Leave a Reply

Your email address will not be published. Required fields are marked *