ಇಡಿ ಪ್ರಶ್ನೆಗೆ ನಾನು ದಣಿದಿದ್ದೇನೆ ಎಂದ ರಾಹುಲ್- ಕೇವಲ 20% ಪ್ರಶ್ನೆಗಷ್ಟೇ ಉತ್ತರ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಪ್ರಶ್ನಿಸುವಾಗ ನನ್ನ ತಾಳ್ಮೆ ಕಂಡು ಅವರೇ ದಂಗಾಗಿ ಹೋಗಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದ ಹೇಳಿಕೆಯನ್ನು ಇ.ಡಿ. ಮೂಲಗಳು ತಿರಸ್ಕರಿಸಿದೆ.

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ಇಡಿ ಅನೇಕ ಪ್ರಶ್ನೆಗಳನ್ನು ಕೇಳಿತ್ತು. ಆ ಸಂದರ್ಭದಲ್ಲಿ ಇಡಿ ನನ್ನ ತಾಳ್ಮೆಯನ್ನು ನೋಡಿ ದಂಗಾಗಿ ಹೋಗಿತ್ತು ಎಂದು ರಾಹುಲ್ ಗಾಂಧಿ ಅವರು ತಿಳಿಸಿದ್ದರು. ಇದೀಗ ಇಡಿ ಮೂಲಗಳು ಇದಕ್ಕೆ ಪ್ರತಿಕ್ರಿಯಿಸಿದ್ದು, ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.

ಈ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೇಳಿದ್ದ ಶೇ.20ರಷ್ಟು ಪ್ರಶ್ನೆಗೂ ರಾಹುಲ್ ಗಾಂಧಿ ಉತ್ತರಿಸಿರಲಿಲ್ಲ. ನಾನು ದಣಿದಿದ್ದೇನೆ ಎಂದು ನೆಪವೊಡ್ಡಿ ಉತ್ತರ ನೀಡುವುದರಿಂದ ತಪ್ಪಿಸಿಕೊಂಡರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ಭ್ರೂಣಗಳನ್ನು ಡೆಮೋನ್‍ಸ್ಟ್ರೇಷನ್‍ಗೆ ಇಟ್ಟಿದ್ವಿ ಎಂದ ವೈದ್ಯೆ

ಬುಧವಾರ ರಾಹುಲ್‍ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದೇನೆ. ದಣಿಯದೇ ತಾಳ್ಮೆಯಿಂದ ಉತ್ತರಿಸಿದ್ದಕ್ಕೆ ಅಧಿಕಾರಿಗಳು ದಂಗಾಗಿ ಹೋಗಿದ್ದರು. ಅಷ್ಟೇ ಅಲ್ಲದೇ ನಿಮ್ಮ ಶಕ್ತಿಯ ಗುಟ್ಟೇನು ಎಂದು ಪ್ರಶ್ನಿಸಿದ್ದಾರೆ ಹೇಳಿಕೆ ನೀಡಿದ್ದರು. ಆಗ ತಾವು ಕಾಂಗ್ರೆಸ್ ಕಾರ್ಯಕರ್ತನಾಗಿ ತರಬೇತಿ ಪಡೆದಿದ್ದು ಹಾಗೂ ಪ್ರತಿನಿತ್ಯ ಧ್ಯಾನ ಮಾಡುವುದು ಸಮಾಧಾನದಿಂದ ಉತ್ತರ ನೀಡಲು ಸಹಾಯ ಮಾಡಿತು ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಶಿವರಾತ್ರಿಯಂದು ಗಲಭೆ – 1 ವರ್ಷ ಬೆಳಗಾವಿ ಜೈಲಿನಲ್ಲೇ ಇರಲಿದ್ದಾನೆ ಮಾಸ್ಟರ್ ಮೈಂಡ್ ಅನ್ಸಾರಿ

Live Tv

Comments

Leave a Reply

Your email address will not be published. Required fields are marked *