24 ಗಂಟೆಯೊಗಳಗೆ ವಾಪಸ್‌ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್‌ ರಾವತ್

Sanjay Raut

ಮುಂಬೈ: ಬಂಡಾಯ ಶಾಸಕರು 24 ಗಂಟೆಯೊಗಳಗೆ ಹಿಂದಿರುಗುವುದಾದರೆ ಶಿವಸೇನೆ ಮೈತ್ರಿಯಿಂದ ಹೊರಬರಲು ಸಿದ್ಧ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡಾಯ ಶಾಸಕರು ಬಯಸಿದರೆ ಶಿವಸೇನೆಯು ಕಾಂಗ್ರೆಸ್ ಮತ್ತು ಎನ್‍ಸಿಪಿ ಪಕ್ಷದೊಂದಿಗೆ ಹಂಚಿಕೊಂಡಿರುವ ಮೈತ್ರಿಯಾದ ಎಂವಿಎಯಿಂದ ಹೊರಬರುತ್ತದೆ. ಆದರೆ ಅವರು 24 ಗಂಟೆಗಳಲ್ಲಿ ಮುಂಬೈಗೆ ಹಿಂದಿರುಗಬೇಕು ಎಂದರು.

ನಿಜವಾದ ಶಿವ ಸೈನಿಕರೆಂದು ಹೇಳುತ್ತಿರುವ ನೀವು, ಪಕ್ಷ ತೊರೆಯುವುದಿಲ್ಲ ಎಂದಿರುವಿರಿ. 24 ಗಂಟೆಗಳಲ್ಲಿ ನೀವು ಮುಂಬೈಗೆ ಮರಳಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸುವುದಾದರೆ, ನಿಮ್ಮ ಬೇಡಿಕೆಯನ್ನು ಪರಿಗಣಿಸಲು ಸಿದ್ಧರಿದ್ದೇವೆ. ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿದೆ. ಟ್ವಿಟ್ಟರ್ ಮತ್ತು ವಾಟ್ಸಪ್‍ನಲ್ಲಿ ಪತ್ರಗಳನ್ನು ಬರೆಯಬೇಡಿ ಎಂದರು. ಇದನ್ನೂ ಓದಿ: ಶಾಸಕರು ಆಯ್ತು ಈಗ ಶಿವಸೇನೆ ಸಂಸದರಿಂದಲೂ ಬಂಡಾಯ

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆ ದೂರಿದೆ. ಶಿವಸೇನೆಯ ಒಟ್ಟು 42 ಬಂಡಾಯ ಶಾಸಕರು ಶಿಂಧೆ ಅವರೊಂದಿಗೆ ಇದ್ದಾರೆ. ಇವರಲ್ಲಿ ಶಿವಸೇನೆಯ 34 ಶಾಸಕರು ಮತ್ತು 7 ಪಕ್ಷೇತರರು ಸೇರಿದ್ದಾರೆ. ಇದನ್ನೂ ಓದಿ: 2.5 ವರ್ಷಗಳಿಂದ ನಿಮ್ಮ ಮನೆಗೆ ನಮಗೆ ಪ್ರವೇಶವೇ ಇರಲಿಲ್ಲ, ಗೇಟ್‌ ಬಳಿ ಕಾಯಬೇಕಿತ್ತು: ಠಾಕ್ರೆಗೆ ಬಂಡಾಯ ಶಾಸಕನ ಪತ್ರ

Live Tv

Comments

Leave a Reply

Your email address will not be published. Required fields are marked *