ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ಕೊಲೆ; ಸಾಕ್ಷಿಗಳ ಕೊರತೆ ಆರೋಪಿ ನಿರ್ದೋಷಿ

ಬೆಳಗಾವಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ತ್ರಿವಳಿ ಕಗ್ಗೊಲೆ ಪ್ರಕರಣದಲ್ಲಿ ಸ್ಯಾಕ್ಷಾಧಾರಗಳ ಕೊರತೆಯಿಂದ ಧಾರವಾಡ ಹೈಕೋರ್ಟ್ ಪೀಠ  ಆರೋಪಿಯನ್ನು ಖಲಾಸೆ ಮಾಡಿದೆ.

ಬೆಳಗಾವಿಯ ಕುವೆಂಪು ನಗರದಲ್ಲಿ 2015ರ ಆಗಸ್ಟ್ 16ರಂದು ನಸುಕಿನ ಜಾವ ತಾಯಿ, ಇಬ್ಬರು ಮಕ್ಕಳು ಸೇರಿ ಮೂವರ ಬರ್ಬರ ಹತ್ಯೆಯಾಗಿತ್ತು. ಘಟನೆಯಲ್ಲಿ ರೀನಾ ಮಾಲಗತ್ತಿ, ಆದಿತ್ಯ ಮಾಲಗತ್ತಿ, ಸಾಹಿತ್ಯ ಮಾಲಗತ್ತಿ ಕೊಲೆಯಾಗಿತ್ತು. ಕೊಲೆಯಾದ 24 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದ ಬೆಳಗಾವಿ ಎಪಿಎಂಸಿ ಪೊಲೀಸರು ತನಿಖೆ ನಡೆಸಿ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ವಾದ ಆಲಿಸಿದ ಬೆಳಗಾವಿ ಕೋರ್ಟ್ 2018ರ ಏಪ್ರಿಲ್ 16ರಂದು ಪ್ರವೀಣ್ ಭಟ್‍ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆ ಬಳಿಕ ತೀರ್ಪು ಪ್ರಶ್ನಿಸಿ ಆರೋಪಿ ಪರ ವಕೀಲರು ಹೈಕೊರ್ಟ್ ಮೆಟ್ಟಿಲೇರಿದ್ದರು. ಇದೀಗ ಧಾರವಾಡ ಹೈಕೋರ್ಟ್ ಪೀಠ  ಸಾಕ್ಷಿಗಳ ಕೊರತೆ ಹಿನ್ನೆಲೆ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದೆ. ಇದನ್ನೂ ಓದಿ: ಮರಾಠಿ ಬೋರ್ಡ್ ಹಾಕಿ ಇಲ್ಲದಿದ್ದರೆ ಕನ್ನಡ ನಾಮಫಲಕ ಇರಲ್ಲ ಎಂದು MES ಪುಂಡಾಟ – ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು

ಘಟನೆ ಹಿನ್ನೆಲೆ: ಬೆಳಗಾವಿಯ ಕುವೆಂಪು ನಗರದಲ್ಲಿ 2015ರ ಆಗಸ್ಟ್ 16 ರಂದು ನಸುಕಿನ ಜಾವ ತ್ರಿವಳಿ ಕೊಲೆ ನಡೆದಿತ್ತು. ಘಟನೆಯಲ್ಲಿ ರೀನಾ ಮಾಲಗತ್ತಿ, ಆದಿತ್ಯ ಮಾಲಗತ್ತಿ, ಸಾಹಿತ್ಯ ಮಾಲಗತ್ತಿಯನ್ನು ಕೊಲೆಗೈಯ್ಯಲಾಗಿತ್ತು. 24 ಗಂಟೆಯಲ್ಲೇ ಎಪಿಎಂಸಿ ಪೊಲೀಸರು ಪ್ರವೀಣ್ ಭಟ್‍ನನ್ನು ಬಂಧಿಸಿದ್ದರು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿತ್ತು. ಆರೋಪಿ ಪರವಾಗಿ ನ್ಯಾಯವಾದಿ ಪ್ರವೀಣ್ ಕರೋಶಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ಸತೀಶ್ ಪಾಟೀಲ್ ಹತ್ಯೆಗೆ ಪೊಲೀಸರ ವೈಫಲ್ಯವೇ ಕಾರಣ: ಸತೀಶ್ ಜಾರಕಿಹೊಳಿ

Live Tv

Comments

Leave a Reply

Your email address will not be published. Required fields are marked *