ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತೆ ಕಾಡಂಚಿನಲ್ಲಿ ಪ್ರತ್ಯಕ್ಷ – ಮದ್ವೆಯಾಗೋದಾಗಿ ನಂಬಿಸಿ ಮೋಸ

ಮೈಸೂರು: ಹತ್ತು ದಿನಗಳ ಹಿಂದೆ 21 ವರ್ಷದ ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ.

mysuru

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಅರ್ಚಕನ ಜೊತೆ ಪರಾರಿಯಾದ ಎರಡು ಮಕ್ಕಳ ತಾಯಿ ಈಗ ಅತಂತ್ರಕ್ಕೆ ಸಿಲುಕಿದ್ದಾಳೆ. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಚಿಗುರು ಮೀಸೆಯ ಯುವ ಅರ್ಚಕ ಆಕೆಯೊಂದಿಗೆ ಹತ್ತು ದಿನ ಒಡನಾಟ ಬೆಳೆಸಿ ನಂತರ ಕಾಡಂಚಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂಬ ಆರೋಪಿಸಲಾಗಿದೆ. ಇದನ್ನೂ ಓದಿ: ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ – ಕಂಗನಾ ಹಳೇ ವೀಡಿಯೋ ವೈರಲ್

mysuru

ಗ್ರಾಮಸ್ಥರ ಕಣ್ಣಿಗೆ ಬಿದ್ದ ಗೃಹಿಣಿ ಅರ್ಚಕನ ಜೊತೆ ಇರಬೇಕೆಂದು ಪಟ್ಟು ಹಿಡಿದಿದ್ದಾಳೆ. ಆದರೆ ಪೂಜಾರಿ ಕೈ ಕೊಟ್ಟು ಪರಾರಿಯಾಗಿದ್ದಾನೆ. 35 ವರ್ಷದ ಗೃಹಿಣಿ ಜೂನ್ 12 ರಂದು ತಂದೆ ಮನೆಯಿಂದ ನಾಪತ್ತೆಯಾಗಿದ್ದಳು. ಈಗ ನಿರ್ಜನ ಪ್ರದೇಶದಲ್ಲಿ ಗೃಹಿಣಿ ಕಾಣಿಸಿಕೊಂಡಿದ್ದಾಳೆ. ಕೌಟುಂಬಿಕ ಸಮಸ್ಯೆಗೆ ಪರಿಹಾರ ಕೇಳಲು ಮಹದೇಶ್ವರನ ದೇವಸ್ಥಾನಕ್ಕೆ ಬಂದಾಗ 21 ವರ್ಷದ ಅರ್ಚಕ ಸಂತೋಷ್ ಈಕೆಯ ಜೊತೆ ಸಲುಗೆ ಬೆಳೆಸಿದ್ದಾನೆ. ನಿನಗೆ ಹೊಸ ಬಾಳು ಕೊಡುತ್ತೇನೆಂದು ನಂಬಿಸಿದ ಸಂತೋಷ್ ಗೃಹಿಣಿಯನ್ನ ಕರೆದೊಯ್ದಿದ್ದಾನೆ. ಹತ್ತು ದಿನಗಳ ಕಾಲ ಆಕೆಯೊಂದಿಗೆ ತಿರುಗಾಡಿ, ನಂತರ ಆತ್ಮಹತ್ಯೆ ನಾಟಕವಾಡಿ ಕಾಡಿಗೆ ಕರೆತಂದಿದ್ದಾನೆ. ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಸಂತೋಷ್ ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ.  ಇದನ್ನೂ ಓದಿ: ಸರ್ಕಾರ ರಚನೆ ಅನುಮತಿ ಕೇಳಲಿದ್ದಾರೆ ಫಡ್ನವಿಸ್‌ – ಶಿಂಧೆ ಟೀಂ ಸೇರಿದ ಮತ್ತೊಬ್ಬ ಶಾಸಕ

ಇಡೀ ರಾತ್ರಿ ಒಂಟಿಯಾಗಿ ಕಾಡಿನಲ್ಲಿ ಕಾಲ ಕಳೆದ ಗೃಹಿಣಿ ಮುಂಜಾನೆ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾಳೆ. ಗೃಹಿಣಿಯ ಕಥೆ ಕೇಳಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗೃಹಿಣಿಗೆ ರಕ್ಷಣೆ ನೀಡಿದ್ದಾರೆ. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಪೂಜಾರಿ ಸಂತೋಷ್ ಇದೀಗ ನಾಪತ್ತೆಯಾಗಿದ್ದು, ಗಂಡನ ಮನೆಯೂ ಇಲ್ಲ, ಬಾಳು ಕೊಡುವುದಾಗಿ ನಂಬಿಸಿದ ಸಂತೋಷ್ ಸಹ ಇಲ್ಲದೆ, ಗೃಹಿಣಿ ಅತಂತ್ರಕ್ಕೆ ಸಿಲುಕಿದ್ದಾಳೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Live Tv

Live Tv

Comments

Leave a Reply

Your email address will not be published. Required fields are marked *