ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಲ್ಲ: ಬಿಸಿ ನಾಗೇಶ್

ಬೆಂಗಳೂರು: ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯುವುದಿಲ್ಲ. ಈ ಬಗ್ಗೆ ಈಗಾಗಲೇ ಸರ್ಕಾರದ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಏನೇ ಸಲಹೆಗಳು ಇದ್ದರು ಕೊಡಬಹುದು. ಅದನ್ನು ಸ್ವೀಕಾರ ಮಾಡುತ್ತೇವೆ. ಇತಿಹಾಸದಲ್ಲಿ ಮೊದಲ ಬಾರಿಗೆ ಪಬ್ಲಿಕ್ ಡೋಮೆನ್‍ಗೆ ಪಠ್ಯ ಹಾಕಿದ್ದೇವೆ. ಯಾವ ದಾರ್ಶನಿಕರಿಗೂ ನಾವು ಅಪಮಾನ ಮಾಡಿಲ್ಲ. ಕುವೆಂಪು ಅವರ ಹೆಚ್ಚುವರಿ ಪಠ್ಯ ಸೇರಿಸಿರುವ ಸರ್ಕಾರ ನಮ್ಮದಾಗಿದೆ. ಆದರೆ ಕೆಲವರು ರಾಜಕೀಯ ಮಾಡಲು ಪಠ್ಯಪುಸ್ತಕವನ್ನು ಬಳಸಿಕೊಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಧಾನಿ ಮೋದಿ ವೇದಿಕೆಯಲ್ಲಿ ಯೋಗ ಮಾಡಲು ಯದುವೀರ್‌ಗೆ ಆಹ್ವಾನ

ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದೆ. ಪ್ರತಿಭಟನೆ ಮಾಡಲು ಸ್ವಾತಂತ್ರ್ಯ ಇದೆ. ಹಾಗಂತ ಇಂತಹ ವಿಷಯಗಳಲ್ಲಿ ರಾಜಕೀಯ ಮಾಡಬಾರದು. ಈಗಾಗಲೇ ನಾಡಗೀತೆಗೆ ಅಪಮಾನ ಮಾಡಿರುವವರ ಮೇಲೆ FIR ದಾಖಲು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ವಾಪಸ್ ಪಡೆಯೊಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: 2nd PUC ಫಲಿತಾಂಶ ‌ಪ್ರಕಟ- 61.88% ಮಕ್ಕಳು ಪಾಸ್‌, ವಿದ್ಯಾರ್ಥಿನಿಯರೇ ಮೇಲುಗೈ

Live Tv

Comments

Leave a Reply

Your email address will not be published. Required fields are marked *