ಇಂಡಿಯನ್ ಆರ್ಮಿ ವಿಶ್ವದಲ್ಲೇ ಫೈನೆಸ್ಟ್ ಆರ್ಮಿ, ಇದಕ್ಕೆ ಡಿಸ್ಟರ್ಬ್ ಮಾಡ್ಬೇಡಿ: ನಿವೃತ್ತ ಸೇನಾಧಿಕಾರಿ ಎಚ್ಚರಿಕೆ

ಮಡಿಕೇರಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಅಗ್ನಿಪಥ್ ಯೋಜನೆಯು ಸೇನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವುದು ಕೊಡಗಿನ ವೀರ ಯೋಧರ ಆತಂಕ. ಸೈನಿಕ ನೇಮಕಾತಿಗೆ ಸಂಬAಧಿಸಿದAತೆ ಅಗ್ನಿಪಥ್ ಎಂಬ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಇಂಡಿಯನ್ ಆರ್ಮಿ ವಿಶ್ವದ ಒಂದು ಫೈನೆಸ್ಟ್ ಆರ್ಮಿಯಾಗಿದೆ. ಇಷ್ಟು ಚೆನ್ನಾಗಿರುವಾಗ ಯಾಕೆ ಅದಕ್ಕೆ ಡಿಸ್ಟರ್ಬ್ ಮಾಡ್ತೀರ? ನ್ಯಾಷನಲ್ ಸೆಕ್ಯೂರಿಟಿ ವಿಚಾರದಲ್ಲಿ ಹುಡುಗಾಟ ಆಡಬೇಡಿ ಎಂದು ಕೊಡಗಿನ ನಿವೃತ್ತ ಸೇನಾಧಿಕಾರಿ ಕರ್ನಲ್ ಮುತ್ತಣ್ಣ ಎಚ್ಚರಿಕೆಯ ಮಾತನ್ನಾಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಅಗ್ನಿಪಥ್ ಪ್ರತಿಭಟನೆಯ ಕಾವು- ಉತ್ತರದ ಬಳಿಕ ದಕ್ಷಿಣದಲ್ಲಿ ಹಿಂಸಾತ್ಮಕ ಪ್ರೊಟೆಸ್ಟ್

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಮಾತಾನಾಡಿದ ಅವರು, ತಾನು 24 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದೇನೆ. ಇಡೀ ವಿಶ್ವದಲ್ಲೇ ಅತ್ಯುತ್ತಮ ಸೇನೆ ಎಂಬ ಹೆಗ್ಗಳಿಕೆ ನಮ್ಮ ಇಂಡಿಯನ್ ಆರ್ಮಿಗಿದೆ. ಎಲ್ಲವೂ ಚೆನ್ನಾಗಿರುವಾಗ ಅದಕ್ಕೆ ತೊಂದರೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು.

ಸರ್ಕಾರದ ಯೋಚನೆ ಸರಿ ಇರಬಹುದು. ಆದರೆ ಸರಿಯಾಗಿ ಆಲೋಚನೆ ಮಾಡಿದಂತಿಲ್ಲ. ಸೇನೆಯಲ್ಲಿ ಲೋಪ ದೋಶಗಳಿಲ್ಲದೆ ಇರುವಾಗ ಯಾಕೆ ಈ ಹೊಸ ಯೋಜನೆ? ಹಣ ಉಳಿಸಬೇಕಾದರೆ ಎಂಎಲ್‌ಎ, ಎಂಪಿ ಪೆನ್ಷನ್ ಕಡಿತಗೊಳಿಸಿ, ರಕ್ಷಣಾ ಇಲಾಖೆ ಕಛೇರಿಯ ಸಿಬ್ಬಂದಿಯನ್ನು ಕಡಿತ ಮಾಡಿ. ಅದು ಬಿಟ್ಟು ಜಗತ್ತಿನ ಶ್ರೇಷ್ಠ ಆರ್ಮಿಗೆ ಡಿಸ್ಟರ್ಬ್ ಮಾಡಬೇಡಿ ಎಂದರು. ಇದನ್ನೂ ಓದಿ: ತೆಲಂಗಾಣ, ಬಿಹಾರದಲ್ಲಿ ಪರಿಸ್ಥಿತಿ ಉದ್ವಿಗ್ನ- ಗುಂಡಿನ ದಾಳಿಗೆ ವ್ಯಕ್ತಿ ಬಲಿ

ಸೇನೆಯಲ್ಲಿ ಟೂರ್ ಆಫ್ ಡ್ಯೂಟಿ ಮಾಡಿದರೆ ದೊಡ್ಡ ಆಪತ್ತು. ಹಾಗಾದರೆ ಡಾಕ್ಟರ್‌ಗಳನ್ನು ಟೂರ್ ಆಫ್ ಡ್ಯೂಟಿ ಮಾಡಿಸಿಬಿಡಿ. ಅಂತಹ ಡಾಕ್ಟರ್‌ಗಳಿಂದ ಆಪರೇಷನ್ ಮಾಡಿಸಿಕೊಳ್ಳುತ್ತೀರಾ? ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಷ್ಯಾ ನಷ್ಟಕ್ಕೆ ಇದೇ ನೀತಿ ಕಾರಣ. ಅಗ್ನಿಪಥ್ ಯೋಜನೆಯಿಂದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತದೆ. ಆರ್ಮಿ ಚೆನ್ನಾಗಿದೆ, ದಯವಿಟ್ಟು ಅದಕ್ಕೆ ಡಿಸ್ಟರ್ಬ್ ಮಾಡಬೇಡಿ ಎಂದು ನಿವೃತ್ತ ಸೇನಾಧಿಕಾರಿ ಕರ್ನಲ್ ಮುತ್ತಣ್ಣ ಮನವಿ ಮಾಡಿದ್ದಾರೆ.

Live Tv

Comments

Leave a Reply

Your email address will not be published. Required fields are marked *