ಸಿನಿಮಾ ನೋಡಲು 5 ಹೆಚ್ಚುವರಿ ಅಂಕ ಮತ್ತು 1 ದಿನ ರಜೆ ಘೋಷಿಸಿದ ಪ್ರಿನ್ಸಿಪಾಲ್: ಪಾಲಕರು ಏನ್ ಹೇಳ್ತಾರೆ?

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ತ್ರಿವಿಕ್ರಮ್ ಹೆಸರಿನಲ್ಲಿ ಮೂಡಿ ಬಂದಿರುವ ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. ಹಾಗಾಗಿ ರಾಜ್ಯಾದ್ಯಂತ ಸಿನಿಮಾ ಟೀಮ್ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ವಿಕ್ರಮ್ ಮತ್ತು ತಂಡ ಸಂವಾದ ನಡೆಸುತ್ತಿದೆ. ಹೀಗೆ ಬೆಳಗಾವಿಯ ಕಾಲೇಜಿಗೆ ಹೋದಾಗ, ಅಲ್ಲಿನ ಪ್ರಾಂಶುಪಾಲರು ಭರ್ಜರಿ ಆಫರ್ ಕೊಟ್ಟಿದ್ದಾರೆ.

ಬೆಳಗಾವಿಯ ಜೈನ್ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಸಿನಿಮಾ ತಂಡವನ್ನು ಅಲ್ಲಿನ ಸಿಬ್ಬಂದಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಿನಿಮಾ ತಂಡ ಮಾತಕತೆ ಮಾಡಿದ ನಂತರ, ಸಿನಿಮಾ ಟೀಮ್ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಾಂಶುಪಾಲರು ಈ ಸಿನಿಮಾವನ್ನು ನೋಡಿ, ಟಿಕೆಟ್ ತಂದು ಕೊಟ್ಟವರಿಗೆ ಐದು ಗ್ರೇಸ್ ಮಾರ್ಕ್ಸ್ ಮತ್ತು ಒಂದು ದಿನ ರಜೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

ಈ ಆಫರ್ ಘೋಷಣೆ ಆಗುತ್ತಿದ್ದಂತೆಯೇ ಕಾಲೇಜಿನ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ಆದರೆ, ಒಂದು ಕಂಡಿಷನ್ ಏನು ಅಂದರೆ, ಸಿನಿಮಾವನ್ನು ಶನಿವಾರ ನೋಡಬೇಕು.  ಮತ್ತು ಟಿಕೆಟ್ ಅನ್ನು ಕಡ್ಡಾಯವಾಗಿ ತಂದು ಕಾಲೇಜಿಗೆ ಒಪ್ಪಿಸಬೇಕು. ಈ ಆಫರ್ ಕೇಳಿದ ಪಾಲಕರು ಬೆಚ್ಚಿಬಿದ್ದಿದ್ದಾರೆ. ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದು ಯಾಕೆ ಎಂಬ ಪ್ರಶ್ನೆಯನ್ನೂ ಮಾಡಿದ್ದಾರಂತೆ. ಆದರೂ, ಈ ಆಫರ್ ಮಾತ್ರ ಕ್ಯಾನ್ಸಲ್ ಆಗಿಲ್ಲ ಎಂದು ಹೇಳಲಾಗುತ್ತಿದೆ.

Live Tv

Comments

Leave a Reply

Your email address will not be published. Required fields are marked *