ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ದಾಖಲೆಯ ಗೆಲುವು

ಮೈಸೂರು: ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಗೆಲುವು ಸಾಧಿಸಿದರು.

ಜೆಡಿಎಸ್ – ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಛಿದ್ರ ಮಾಡಿದ್ದು, ಮೈಸೂರು ಭಾಗದಲ್ಲಿ ಮತ್ತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಡಿತ ಸಾಧಿಸಿದ್ದಾರೆ. ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ ಜೆಡಿಎಸ್ ಮೂರನೇ ಸ್ಥಾನವನ್ನು ಪಡೆದಿದೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಗೆಲುವಿಗೆ ನಿಗದಿಪಡಿಸಿದ್ದ ಕೋಟಾವನ್ನು ಯಾವೊಬ್ಬ ಅಭ್ಯರ್ಥಿಯೂ ಪಡೆದಿರಲಿಲ್ಲ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಒಟ್ಟಾರೆಯಾಗಿ ಮಧು ಮಾದೇಗೌಡ 12,205 ಮತಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.

Congress

ಮಧು ಜಿ. ಮಾದೇಗೌಡ ಒಟ್ಟು 45,275 ಮತಗಳನ್ನು ಪಡೆದುಕೊಂಡಿದ್ದರು. ಆದರೆ ಗೆಲುವಿಗೆ ನಿಗದಿಯಾದ 46,083 ಮತಗಳ ಕೋಟಾವನ್ನು ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಇದೇ ವೇಳೆ ಚುನಾವಣಾ ಆಯೋಗದ ನಿರ್ದೇಶನದಂತೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿ ಮೈ. ವಿ. ರವಿಶಂಕರ್ ಎಲಿಮಿನೆಟ್ ಮಾಡಿ ಅಲ್ಲಿಂದ 808 ಪಡೆಯಲಾಯಿತು. ನಿಗದಿತ ಕೋಟಾ ತಲುಪುತ್ತಿದ್ದಂತೆಯೇ ಎಣಿಕೆ ಕಾರ್ಯ ನಿಲ್ಲಿಸಿ, ಮಧು ಅವರನ್ನು ವಿಜೇತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಇದನ್ನೂ ಓದಿ: ಕಾವೇರಿ ನದಿಯಲ್ಲಿ ಅಕ್ರಮ ಮರಳುಗಾರಿಕೆ- ಲಾರಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಈ ಬಾರಿ ಜೆಡಿಎಸ್‍ಗೆ ತನ್ನ ಸಾಂಪ್ರದಾಯಿಕ ಬರಲೇ ಇಲ್ಲ. ಜೆಡಿಎಸ್‍ನ ಸಾಂಪ್ರದಾಯಿಕ ಮತ ಬ್ಯಾಂಕ್ ಛಿದ್ರವಾದದ್ದೆ ಕಾಂಗ್ರೆಸ್‍ಗೆ ವರವಾಗಿದೆ. ಮೈಸೂರಿಗೆ ಬರುವ ಪ್ರಧಾನಿ ಮೋದಿಗೆ ವಿಜಯದ ಗಿಫ್ಟ್ ಕೊಡುವ ಬಿಜೆಪಿಗರ ಆಸೆಗೂ ತಣ್ಣೀರು ಬಿದ್ದಿದ್ದು, ಸಿಎಂ, ಸಚಿವರ ಹಾದಿಯಾಗಿ ಎಲ್ಲರೂ ಬಂದು ಪ್ರಚಾರ ಮಾಡಿದರು ಕಮಲಕ್ಕೂ ಗೆಲುವು ಸಿಗಲಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್‌ ಮತ್ತೆ ಏರಿಕೆ; ಸರ್ಕಾರದಿಂದ ಪರಿಷ್ಕೃತ Guidelines ಪ್ರಕಟ – ಮಾರ್ಗಸೂಚಿಯಲ್ಲೇನಿದೆ?

Live Tv

Comments

Leave a Reply

Your email address will not be published. Required fields are marked *