ಅಣ್ಣನ ಹೆಸರಿಗೆ ಆಸ್ತಿ ಮಾಡಿಸ್ತಾನೆ ಅಂತ JDS ಕಾರ್ಯಕರ್ತನ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ

ಚಿಕ್ಕಬಳ್ಳಾಪುರ: ಅಣ್ಣನ ಹೆಸರಿಗೆ ಆಸ್ತಿ ಮಾಡಿಸ್ತಾನೆ ಅಂತ ಜೆಡಿಎಸ್ ಕಾರ್ಯಕರ್ತನ ಕೊಲೆ ಮಾಡಿ ಅಪಘಾತ ಅಂತ ಬಿಂಬಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಪಟ್ಟಣದಿಂದ ಸ್ವಗ್ರಾಮಕ್ಕೆ ಬೈಕ್‍ನಲ್ಲಿ ತೆರಳುತ್ತಿದ್ದ ಜೆಡಿಎಸ್ ಕಾರ್ಯಕರ್ತ ರಸ್ತೆ ಮಧ್ಯೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದ. ಇದನ್ನು ನೋಡಿದವರು ಅಪಘಾತವಾಗಿ ಆತ ಸಾವನ್ನಪ್ಪಿದ್ದಾನೆ ಎಂದೇ ತಿಳಿದುಕೊಂಡಿದ್ದರು. ಆದ್ರೆ ಪೊಲೀಸರ ತನಿಖೆಯಿಂದ ಅದು ಅಪಘಾತವಾಲ್ಲ, ಕೊಲೆ ಎನ್ನುವುದು ಗೊತ್ತಾಗಿದೆ. ಇದನ್ನೂ ಓದಿ:  ಹರಿತವಾದ ಕಥೆಯ ಸುಳಿವಿನೊಂದಿಗೆ ಬಂತು ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್! 

ಪ್ರಸ್ತುತ ಹತ್ಯೆ ಮಾಡಿದವನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಘಟನೆಯ ವಿವರ?
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚೀಮಮಂಗಲ ಮಾರ್ಗದ ನಾರಾಯಣದಾಸರಹಳ್ಳಿ ಬಳಿ ಜೂನ್ 02 ರ ರಾತ್ರಿ 10 ಗಂಟೆ ಸುಮಾರಿಗೆ ಕನ್ನಮಂಗಲ ನಿವಾಸಿ ಜೆಡಿಎಸ್ ಕಾರ್ಯಕರ್ತ ಚಿಕ್ಕಅಂಜಿನಪ್ಪ ರಸ್ತೆ ಮಧ್ಯೆ ಬೈಕ್ ಸಮೇತ ಬಿದ್ದು ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದ. ಆರಂಭದಲ್ಲಿ ಎಲ್ಲರೂ ಈತ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದೇ ತಿಳಿದುಕೊಂಡಿದ್ರು. ಆದರೆ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆಸಲಿ ಸತ್ಯ ಗೊತ್ತಾಗಿದ್ದು, ಇದು ಅಪಘಾತವಲ್ಲ ಹತ್ಯೆ ಅನ್ನೋದು ತಿಳಿದುಬಂದಿದೆ. ಕೊಲೆ ಮಾಡಿದವನು ಕನ್ನಮಂಗಲ ಗ್ರಾಮದ ವೆಂಕಟೇಶ್ ಎಂದು ಗೊತ್ತಾಗಿದ್ದು, ಪೊಲೀಸರು ಆತನನ್ನ ಅರೆಸ್ಟ್ ಮಾಡಿದ್ದಾರೆ.

ಕೊಲೆಗೆ ಕಾರಣವೇನು?
ಕೊಲೆಯಾದ ಚಿಕ್ಕಅಂಜಿನಪ್ಪ, ಕೊಲೆ ಮಾಡಿದ ವೆಂಕಟೇಶ್ ಒಂದೇ ಗ್ರಾಮದವರು. ಇವರಿಬ್ಬರ ಮಧ್ಯೆ ಯಾವುದೇ ಗಲಾಟೆ ಆಗಿರಲಿಲ್ಲ. ಆದರೆ ಚಿಕ್ಕಅಂಜಿನಪ್ಪ, ವೆಂಕಟೇಶ್‍ನ ಅಣ್ಣ ನಾಗೇಶ್‍ಗೆ ತಮ್ಮ ಪಿತ್ರಾರ್ಜಿತ ಆಸ್ತಿಯನ್ನ ತನ್ನ ಹೆಸರಿಗೆ ಖಾತೆ ಮಾಡಿಕೊಳ್ಳಲು ಸಹಾಯ ಮಾಡ್ತಿದ್ದಾನೆ. ಶಿಡ್ಲಘಟ್ಟ ತಾಲೂಕು ಕಚೇರಿ ಬಳಿ ಇರ್ತಿದ್ದ ಚಿಕ್ಕಅಂಜಿನಪ್ಪ ಭೂ ವ್ಯಾಜ್ಯದ ದಾಖಲೆಗಳನ್ನ ಖಾತೆ ಮಾಡಿಸೋದ್ರಲ್ಲಿ ಎಕ್ಸ್ ಫರ್ಟ್ ಆಗಿದ್ದ. ಹೀಗಾಗಿ ನಾಗೇಶ್‍ಗೆ ಜಮೀನು ಖಾತೆ ಮಾಡಿಸಿದ್ದಾನೆ.

ನನಗೆ ಯಾವುದೇ ಆಸ್ತಿಬಾರದೆ ಇರುವ ಹಾಗೆ ಮಾಡಿ ಬಿಡ್ತಾನೆ. ಇವನು ಇದ್ರೇ ತಾನೇ ಆಸ್ತಿ ಹೋಗುತ್ತೆ ಅಂತ ಅನುಮಾನದ ಮೇರೆಗೆ ಚಿಕ್ಕಅಂಜಿನಪ್ಪನ ಕೊಲೆಗೆ ವೆಂಕಟೇಶ್ ಪ್ಲಾನ್ ಮಾಡಿ ಮೂಹೂರ್ತ ಇಟ್ಟಿದ್ದಾನೆ. 2-3 ತಿಂಗಳು ಚಿಕ್ಕಅಂಜಿನಪ್ಪನನ್ನ ಫಾಲೋ ಮಾಡಿ ಅವನ ಚಲನವಲನ ಗಮನಿಸಿದ್ದಾನೆ.

ಜೂನ್ 02 ರಾತ್ರಿ 09 ಗಂಟೆ ಸುಮಾರಿಗೆ ವೆಂಕಟೇಶ್ ಚಿಕ್ಕಅಂಜಿನಪ್ಪ ನಂಬರ್‌ಗೆ ಕರೆ ಮಾಡಿ ಎಲ್ಲಿದ್ದೀಯಾ ಅಣ್ಣ? ನಾನು ಇಲ್ಲಿ ರೋಡ್‍ನಲ್ಲಿ ಇದ್ದೇನೆ ಮಾತನಾಡಬೇಕು ಬಾ ಅಂತ ಹೇಳಿ ಶಿಡ್ಲಘಟ್ಟ ಪಟ್ಟಣದಿಂದ ಸ್ವಗ್ರಾಮಕ್ಕೆ ಬರ್ತಿದ್ದ ಚಿಕ್ಕಅಂಜಿನಪ್ಪ ರಸ್ತೆ ಮಧ್ಯೆ ವೆಂಕಟೇಶ್‍ನನ್ನ ನೋಡಿ ಬೈಕ್ ನಿಲ್ಲಿಸಿದ್ದಾನೆ. ಆಗ ಹಿಂಬಂದಿಯಿಂದ ದೊಣ್ಣೆಯಲ್ಲಿ ತಲೆಗೆ ಬಲವಾಗಿ ಒಡೆದು ಕೊಲೆ ಮಾಡಿ ಅಲ್ಲಿಂದ ವೆಂಕಟೇಶ್ ಪರಾರಿಯಾಗಿದ್ದ. ಇದನ್ನೂ ಓದಿ: ಅಶ್ವಥ ಎಲೆಯಲ್ಲಿ ಮೂಡಿದ ಮಾಸ್ಟರ್ ಬ್ಲಾಸ್ಟರ್ – ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ ಉಡುಪಿಯ ಮಹೇಶ್ 

ಆರಂಭದಲ್ಲಿ ಅಪಘಾತ ಅಂತಲೇ ಎಲ್ಲರೂ ನಂಬಿದ್ರು. ಆದ್ರೆ ಬೈಕ್‍ಗೆ ಯಾವುದೇ ಹಾನಿಯಾಗಿಲ್ಲ. ತಲೆಗೆ ಮಾತ್ರ ಹೇಗೆ ಬಲವಾದ ಗಾಯವಾಗಿದೆ ಎಂದು ಅನುಮಾನಗೊಂಡು ಮೃತನ ಸಂಬಂಧಿಕರು ಗ್ರಾಮದ ಇತರೆ ಜನರ ಮೇಲೆಯೂ ಕೊಲೆ ಪ್ರಕರಣ ದಾಖಲಿಸಿದರು. ಆದರೆ ಅಂತಿಮವಾಗಿ ಕರೆ ಮಾಡಿದ ವೆಂಕಟೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪೊಲೀಸ್‌ ಟ್ರೀಟ್‍ಮೆಂಟ್ ಕೊಟ್ಟಾಗ ಆಸಲಿ ಸತ್ಯ ಒಪ್ಪಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *