ಇದಕ್ಕಿಂತ ಮೊದಲು ನಿಜವಾದ ಪ್ರೀತಿ ಅನುಭವಿಸಿಲ್ಲ – ಕಾರಿನ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ

ವಾಷಿಂಗ್ಟನ್: ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವುದು, ಕಾರಿನಲ್ಲಿ ಸುತ್ತುವುದು ಎಲ್ಲ ಮನುಷ್ಯರಿಗೂ ಇರುವ ಸಾಮಾನ್ಯ ಆಸೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಾರಿನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು. ಇದಕ್ಕಿಂತ ಮೊದಲು ನಾನು ನಿಜವಾದ ಪ್ರೀತಿಯನ್ನು ಅನುಭವಿಸಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಯುಎಸ್ ಅರ್ಕಾನಸ್ ಮೂಲದ ನಥಾನಿಯಲ್ ವ್ಯಕ್ತಿ ಕಾರಿನ ಜೊತೆ ಸಂಬಂಧ ಹೊಂದಿದ್ದಾನೆ. ಕಾರಿನ ದಾಸನಾಗಿರುವ ನಥಾನಿಯಲ್ ಅದರ ಜೊತೆಯೇ ಸಂಸಾರದ ಸುಖವನ್ನು ಅನುಭವಿಸುತ್ತಿದ್ದಾನೆ. ಏನಿದು ಇದು ನಿಜನಾ ಎಂದು ಹುಬ್ಬೇರಿಸುತ್ತೀರಾ. ಹೌದು ಇದು ನಿಜ. ಇದನ್ನೂ ಓದಿ:  ಕೆರೆಯಲ್ಲಿ ತೇಲಿಬಂದ ಸೂಟ್‍ಕೇಸ್ – ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಡಾಕ್ಯುಮೆಂಟರಿಯಲ್ಲಿ ಪ್ರಸಾರ
‘ಮೈ ಸ್ಟ್ರೇಂಜ್ ಅಡಿಕ್ಷನ್’ ಟಿಎಲ್‍ಸಿ ಡಾಕ್ಯುಮೆಂಟರಿ ಸರಣಿಯ ಆಬ್ಬೆಕ್ಟೋಫಿಲಿಯಾ ಎಪಿಸೋಡ್‍ನಲ್ಲಿ ಈ ವಿಷಯವನ್ನು ಪ್ರಸಾರ ಮಾಡಲಾಗಿತ್ತು. ಇದರಲ್ಲಿ ನಥಾನಿಯಲ್ ತನ್ನ ಕಾರಿನ ಜೊತೆ ರೊಮ್ಯಾಂಟಕ್ ಸಂಬಂಧ ಹೊಂದಿರುವುದು ಪ್ರಸಾರವಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದೆ.

ಆಬ್ಬೆಕ್ಟೋಫಿಲಿಯಾ ಎಂದರೆ ಇದರರ್ಥ ಜನರಿಗೆ ಯಾವ ವಸ್ತು ಜೊತೆ ಹೆಚ್ಚು ಭಾವನೆ ಹೊಂದಿರುತ್ತಾರೆ ಅಥವಾ ಲೈಂಗಿಕ ಸಂಬಂಧ ಹೊಂದಿರುವುದೇ ಆಗಿದೆ. ಅದೇ ರೀತಿ ನಥಾನಿಯಲ್ ಕೂಡ ತನ್ನ ಕಾರಿನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ಭಾಗ. ಅನೇಕ ಜನರು ಈ ಗೀಳನ್ನು ಹೊಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಥಾನಿಯಲ್, 2005ರಲ್ಲಿ ಚೇಸ್‍ನನ್ನು(ಕಾರು) ಡೀಲರ್ ಬಳಿ ನೋಡಿದ ಮೇಲೆ ನೋಡಿದಾಗ ಮೊದಲ ನೋಟದಲ್ಲೇ ಪ್ರೀತಿಯಾಯಿತು. ಬಳಿಕ ಅದನ್ನು ಖರೀದಿಸಿ ಬಳಸಲು ಆರಂಭಿಸಿದ ಸ್ವಲ್ಪದಿನಗಳಲ್ಲಿ ಪ್ರೀತಿ ಹೆಚ್ಚಾಗಿ ರೊಮ್ಯಾಂಟಿಕ್ ಸಂಬಂಧಕ್ಕೆ ತಿರುಗಿತು. ಕೆಲವೊಮ್ಮೆ ದೈಹಿಕ ಸಂಬಂಧ ಸಹ ನಮ್ಮಿಬ್ಬರ ನಡುವೆ ಇರಲಿದೆ. ನಾನು ನನ್ನ ಕಾರಿನ ಜೊತೆ ಗಾಢವಾದ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಮನೆಗೆ ಕರೆಸಿ ನವಜೋಡಿಯನ್ನು ಹತ್ಯೆ ಮಾಡಿದ ನವವಧು ಪೋಷಕರು 

ಹಾಡನ್ನು ಹೇಳುತ್ತಾ ಸಂಭೋಗ
ನಥಾನಿಯಲ್‍ಗೆ ಸಂಬಂಧಿಸಿದ ಡಾಕ್ಯುಮೆಂಟರಿಯಲ್ಲಿ 1998ರ ಸರಣಿಯ ಛವೆ ಮೊಂಟೆ ಕಾರ್ಲೋ ಕಾರಿನ ಜೊತೆ ನಥಾನಿಯಲ್ ಹೇಗೆ ಸಂಬಂಧ ಹೊಂದಿದ್ದ ಎಂದು ವಿವರಿಸಲಾಗಿದೆ. ತನ್ನ ಕಾರಿನ ಜೊತೆಗೆ ಟೆಲಿಪತಿ ಸಂವಹನ ಹೊಂದಿದ್ದ ಈತ, ಹಾಡನ್ನು ಹೇಳುತ್ತಾ ಅದರ ಜೊತೆಗೆ ಲೈಂಗಿಕ ಸಂಭೋಗ ನಡೆಸುತ್ತಿದ್ದ ಎಂಬುದನ್ನು ತಿಳಿಸಲಾಗಿದೆ.

Comments

Leave a Reply

Your email address will not be published. Required fields are marked *