ಮಂಡ್ಯದ ಎಟಿಎಂ ಕಳ್ಳ ಉತ್ತರಪ್ರದೇಶದಲ್ಲಿ ಅರೆಸ್ಟ್

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲಯ ಎಟಿಎಂವೊಂದರಲ್ಲಿ ಹಣ ಕದ್ದಿದ್ದ ಖತರ್ನಾಕ್ ಕಳ್ಳನೋರ್ವನನ್ನು ಪೊಲೀಸರು ಉತ್ತರಪ್ರದೇಶದಲ್ಲಿ ಬಂಧಿಸಿದ್ದಾರೆ.

ಕಳೆದ ಏಪ್ರಿಲ್ 11ರಂದು ಮಂಡ್ಯ ಜಿಲ್ಲೆಯ ಮದ್ದೂರಿನ ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ  ಕೆಎಸ್‌ಆರ್‌ಸಿ ಬಸ್ ಡಿಪೋ ಪಕ್ಕದಲ್ಲಿರುವ ಎಸ್‍ಬಿಐನ ಎಟಿಎಂನಲ್ಲಿ ಆರೋಪಿ ಮತ್ತು ಗ್ಯಾಂಗ್ ಕಳ್ಳತನ ಮಾಡಿದ್ದಾರೆ.

ಸಿಸಿಟಿವಿ ನಾಶ ಮಾಡಿ ಗ್ಯಾಸ್ ಕಟರ್‌ನಿಂದ ಎಟಿಎಂನಲ್ಲಿದ್ದ 20 ಲಕ್ಷದ 62 ಸಾವಿರದ 800 ರೂಪಾಯಿಯನ್ನು ಕದ್ದು ಖದೀಮರು ಪರಾರಿಯಾಗಿದ್ದರು. ಈ ಘಟನೆಯ ಸಂಬಂಧ ತನಿಖೆ ನಡೆಸಲು ಮಂಡ್ಯ ಎಸ್‍ಪಿ ಯತೀಶ್, ಮದ್ದೂರು ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದಲ್ಲಿ 8 ಮಂದಿಯ ತಂಡವನ್ನು ರಚಿಸಿದ್ದರು. ನಂತರ ಕಾರ್ಯಾಚರಣೆಗಿಳಿದ ಪೊಲೀಸರ ತಂಡಕ್ಕೆ ಎಟಿಎಂ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸ್ವಿಫ್ಟ್ ಕಾರೊಂದು ಬಹಳ ಹೊತ್ತಿನಿಂದ ನಿಂತಿರುವುದನ್ನುದು ಕಂಡಿದ್ದಾರೆ. ಕಾರು ಮದ್ದೂರಿನ ಎಳನೀರು ಮಾರ್ಕೆಟ್ ಹಿಂದಿರುವ ಬಡಾವಣೆಗೆ ಹೋಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

ನಂತರ ಕಾರು ಇದ್ದ ಮನೆ ಬಳಿ ವಿಚಾರಿಸಿದಾಗ ಎಳನೀರು ವ್ಯಾಪಾರಿಯೊಬ್ಬರಿಗೆ ಬಾಡಿಗೆ ಮನೆ ನೀಡಲಾಗಿತ್ತು. ಅವರು ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಬಾಡಿಗೆ ಪಾವತಿ ಮಾಡಿದ್ದ ಫೋನ್ ನಂಬರ್ ಪತ್ತೆ ಹಚ್ಚಿದ ಪೊಲೀಸರು, ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ಆರೋಪಿ ದೀಪಕ್ ಕುಮಾರ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

ವಿಚಾರಣೆ ವೇಳೆ ಎಳನೀರು ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ನಾಲ್ವರೊಂದಿಗೆ ಸೇರಿ ಎಟಿಎಂ ಲೂಟಿ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗಳಲ್ಲಿ ಇಬ್ಬರು ಉತ್ತರ ಪ್ರದೇಶದವರಾಗಿದ್ದು, ಇನ್ನಿಬ್ಬರು ಹರಿಯಾಣದವರಾಗಿದ್ದಾರೆ. ಈ ವಿಚಾರವಾಗಿ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ.

Comments

Leave a Reply

Your email address will not be published. Required fields are marked *