ತಿರುಪತಿಗೆ ಭೇಟಿ ನೀಡಿದ ನಯನತಾರಾ ಮತ್ತು ವಿಘ್ನೇಶ್ ಶಿವನ್

ನಿನ್ನೆಯಷ್ಟೇ ಚೆನ್ನೈನಲ್ಲಿ ಮದುವೆ ಆಗಿದ್ದ ಸ್ಟಾರ್ ಜೋಡಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇಂದು ತಿರುಪತಿಗೆ ಭೇಟಿ ನೀಡಿದರು. ಶುಕ್ರವಾರ ಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದ ಜೋಡಿಯು, ಕೆಲ ಹೊತ್ತು ತಿಮ್ಮಪ್ಪನ ಸನ್ನಿಧಾನದಲ್ಲೇ ಉಳಿದುಕೊಂಡರು.

ಅಂದುಕೊಂಡಂತೆ ಆಗಿದ್ದರೆ ತಿರುಪತಿಯಲ್ಲೇ ಈ ಜೋಡಿ ಮದುವೆ ಆಗಬೇಕಿತ್ತು. ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಈ ಕುರಿತು ಮಾತನಾಡಿದ್ದರು. ಕೊನೆಯ ಕ್ಷಣದ ಬದಲಾವಣೆಯಿಂದಾಗಿಯೇ ತಿರುಪತಿಯಿಂದ ತಮಿಳುನಾಡಿನ ಮಹಾಬಲಿಪುರಂಗೆ ಶಿಫ್ಟ್ ಆಯಿತು. ನಿನ್ನೆ ಈ ಜೋಡಿ ಸಿನಿಮಾ ರಂಗದ ಅನೇಕ ಗಣ್ಯರ ಸಮ್ಮುಖದಲ್ಲಿ ಸತಿಪತಿಗಳಾದರು. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

ತಿರುಪತಿ ದೇವಸ್ಥಾನಕ್ಕೆ ಬಂದ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು ನಯನತಾರಾ. ಹಸಿರು ಬಣ್ಣದ ಅಂಚಿನ ಹಳದಿ ಬಣ್ಣದ ಸೀರೆಯುಟ್ಟಿದ್ದರು. ವಿಘ್ನೇಶ್ ಕೂಡ ಸಾಂಪ್ರದಾಯಿಕ ಉಡುಗೊರೆಯಲ್ಲೇ ಮಿಂಚುತ್ತಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಕುಟುಂಬದ ಒಪ್ಪಿಗೆ ಪಡೆದುಕೊಂಡು ನಿನ್ನೆ ಹೊಸ ಜೀವನಕ್ಕೆ ಕಾಲಿಟ್ಟಿದೆ. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಈ ಮದುವೆಯಲ್ಲಿ ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *