ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಳಿ ಸಿಕ್ತು ಕೋಟಿ ಹಣ

ಕಾರವಾರ: ರೈಲಿನ ಮೂಲಕ ಮುಂಬೈನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ದಾಖಲೆ ರಹಿತ ಎರಡು ಕೋಟಿ ಹಣವನ್ನು ಕಾರವಾರದ ರೈಲ್ವೆ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಅಲಿಯಾಸ್ ಚೇನ್ ಸಿಂಗ್ ಆರೋಪಿ. ಮಂಗಳೂರು ಎಕ್ಸ್‍ಪ್ರೆಸ್ ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತಿದ್ದ ಮನೋಹರ್ ಸಿಂಗ್‍ನನ್ನು ಕಾರವಾರದ ಬಳಿ ರೈಲ್ವೆ ಪೊಲೀಸರು ದಂಡ ವಿಧಿಸಿದ್ದರು. ಈ ವೇಳೆ ಅನುಮಾನಗೊಂಡ ರೈಲ್ವೆ ಪೊಲೀಸರು ಈತನ ಬಳಿ ಇದ್ದ ಬ್ಯಾಗ್ ಅನ್ನು ತಪಾಸಣೆಗೆ ಒಳಪಡಿಸಿದಾಗ ಈತನ ಬಳಿ ಇದ್ದ ಬ್ಯಾಗಿನಲ್ಲಿ 100 ಬಂಡಲ್‍ನ ಎರಡು ಕೋಟಿ ಹಣ ಪತ್ತೆಯಾಗಿದೆ.

train

ಮನೋಹರ್ ಸಿಂಗ್ ಮುಂಬೈನ ಭರತ್ ಬಾಯ್ ಅಲಿಯಾಸ್ ಪಿಂಟೊ ಎಂಬುವರ ಬಳಿ 15 ಸಾವಿರಕ್ಕೆ ಕೆಲಸ ಮಾಡುತಿದ್ದ. ಮನೋಹರ್ ಸಿಂಗ್ ತನ್ನ ಮಾಲೀಕನಿಂದ ಬ್ಯಾಗ್ ಪಡೆದು ಮಂಗಳೂರಿನಲ್ಲಿ ರಾಜು ಎಂಬವರಿಗೆ ತಲುಪಿಸಲು ಮುಂಬೈನಿಂದ ಮಂಗಳೂರಿಗೆ ಹೊರಟಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ

ರೈಲ್ವೆ ಪೊಲೀಸರು ಆರೋಪಿಯನ್ನು ಕಾರವಾರ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿದ್ದ ಮಗನ ಶವ ಹಿಂಪಡೆಯಲು 50 ಸಾವಿರಕ್ಕಾಗಿ ಭಿಕ್ಷೆ ಬೇಡಿದ ವೃದ್ಧ ದಂಪತಿ

Comments

Leave a Reply

Your email address will not be published. Required fields are marked *