ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

ಚಾರ್ಯ ಸಿನಿಮಾ ಸೋತಿದ್ದಕ್ಕೆ ತೆಲುಗು ನಟ ಚಿರಂಜೀವಿ ತಮ್ಮ ಸಿನಿಮಾ ನಿರ್ದೇಶಕನಿಂದ ಮೂವತ್ತು ಕೋಟಿ ರೂಪಾಯಿಯನ್ನು ವಿತರಕರಿಗೆ ಮರುಪಾವತಿಸುವಂತೆ ಹೇಳಿದರೆ, ಇತ್ತ ತಮಿಳು ಚಿತ್ರದ ಖ್ಯಾತ ನಟ ಕಮಲ್ ಹಾಸನ್ ತಮ್ಮ ವಿಕ್ರಮ್ ಸಿನಿಮಾ ಗೆದ್ದಿರುವುದಕ್ಕೆ ನಿರ್ದೇಶಕರ ತಂಡಕ್ಕೆ ಭಾರೀ ಉಡುಗೊರೆ ನೀಡಿದ್ದಾರೆ. ಕಮಲ್ ಹಾಸನ್ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ನಾಲ್ಕೇ ದಿನಕ್ಕೆ 175 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ವಾರದಲ್ಲಿ ಸಿನಿಮಾ ಇನ್ನೂರು ಕೋಟಿ ಕ್ಲಬ್ ಗೆ ಸೇರಲಿದೆ ಎಂದು ಅಂದಾಜಿಸಲಾಗಿದೆ. ಈ ಖುಷಿಗಾಗಿ ಕಮಲ್ ಹಾಸನ್, ತಮ್ಮ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದದ್ದಾರೆ. ಈ ಕಾರಿಗೆ ಅಂದಾಜು 70 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

ಕೇವಲ ನಿರ್ದೇಶಕರಿಗೆ ಮಾತ್ರವಲ್ಲ, ಸಹ ನಿರ್ದೇಶನದ ತಂಡಕ್ಕೂ ಕೂಡ ದುಬಾರಿ ಬೈಕ್ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟು 18 ಜನರಿಗೆ ಈ ಬೈಕ್ ದೊರೆತಿದೆ. ವಿಕ್ರಮ್ ಸಿನಿಮಾ ಗೆಲುವಿಗೆ ಚಿತ್ರತಂಡವೇ ಕಾರಣ ಎನ್ನುವ ಕಾರಣಕ್ಕಾಗಿ ಇಂಥದ್ದೊಂದು ಉಡುಗೊರೆಯನ್ನು ಕಮಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವದಾದ್ಯಂತ ಚಿತ್ರಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಅಲ್ಲದೇ, ಕರ್ನಾಟಕದಲ್ಲೂ ಈ ಸಿನಿಮಾ ಚೆನ್ನಾಗಿಯೇ ದುಡ್ಡು ಮಾಡಿದೆ.

Comments

Leave a Reply

Your email address will not be published. Required fields are marked *