ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ: ಬೊಮ್ಮಾಯಿ

ಬೆಂಗಳೂರು: ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟರು.

ಅನುಭವ ಮಂಟಪ ಇರುವ ಜಾಗದ ಸಂರಕ್ಷಣೆ, ಸಂಶೋಧನೆಗೆ ಸ್ವಾಮೀಜಿಗಳಿಂದ ಒತ್ತಾಯ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಅನುಭವ ಮಂಟಪದ ಕುರಿತು ಭಾನುವಾರ ಮನವಿ ಮಾಡಿದ್ದಾರೆ. ಈ ವೇಳೆ ಕೆಲವು ದಾಖಲೆಗಳನ್ನೂ ಕೊಟ್ಟಿದ್ದಾರೆ. ಎಲ್ಲ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಲುಷಿತ ನೀರು ಕುಡಿದು ಮೂವರ ಸಾವು, ಸರ್ಕಾರದಿಂದ ತನಿಖೆ: ಸಿಎಂ 

TEXTBOOK

ಪರಿಷ್ಕೃತ ಪಠ್ಯಗಳನ್ನು ವಾಪಸ್ ಪಡೆಯಿರಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ, ಸಿದ್ದರಾಮಯ್ಯ ಅವರು ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ. ಅವರ ಕಾಲದಲ್ಲಿಯೂ ಪಠ್ಯಪುಸ್ತಕ ಪರಿಷ್ಕರಣೆ ಆಗಿಲ್ವಾ? ಸಮಿತಿ ವಿಸರ್ಜನೆ ಮಾಡುತ್ತೇವೆ. ಪಠ್ಯದಲ್ಲಿ ಸಮಸ್ಯೆಗಳಿದ್ರೆ ಪರಿಷ್ಕರಣೆ ಮಾಡಿ ಮುದ್ರಣ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಎಲ್ಲಿ ತಪ್ಪಾಗಿದೆ ಅದನ್ನು ಸರಿಪಡಿಸಲು ನಾವು ಸಿದ್ಧ ಇದ್ದೇವೆ ಎಂದು ಭರವಸೆ ಕೊಟ್ಟರು.

ಇಂದು ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಜನ್ಮದಿನದ ಹಿನ್ನೆಲೆ ತಮ್ಮ ತಂದೆಯ ಭಾವಚಿತ್ರಕ್ಕೆ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಸಲ್ಲಿಸಿ ಕೈಮುಗಿದರು. ಇದನ್ನೂ ಓದಿ: ಆರೋಗ್ಯಕರವಾದ ಜೀರಿಗೆ ರಸಂ ಸುಲಭ ವಿಧಾನದಲ್ಲಿ ಮಾಡಿ ಸವಿಯಿರಿ 

Comments

Leave a Reply

Your email address will not be published. Required fields are marked *