ವಿಶ್ವಪರಿಸರ ದಿನ- ರಾಜಭವನದಲ್ಲಿ ರುದ್ರಾಕ್ಷಿ ಸಸಿ ನೆಟ್ಟ ರಾಜ್ಯಪಾಲರು

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜಭವನದ ಅಂಗಳದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರುದ್ರಾಕ್ಷಿ ಹಾಗೂ ಕೆಂಡ ಸಂಪಿಗೆ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕರೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜಭವನದಲ್ಲಿ ಯುವ ಮತ್ತು ಸಬಲೀಕರಣ ಕ್ರೀಡಾ ಇಲಾಖೆ, ಜಿಲ್ಲಾಡಳಿತ, ವಿವಿಧ ಕಾಲೇಜು ಅಧಿಕಾರಿಗಳು ಸಹಯೋಗದಲ್ಲಿ ಭಾನುವಾರ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

ರುದ್ರಾಕ್ಷಿ, ಕೆಂಡಸಂಪಿಗೆ, ಮನೋರಂಜನಿ ಜಾತಿಯ 20 ಸಸಿಗಳನ್ನು ರಾಜಭವನದಲ್ಲಿ ನೆಡಲಾಯಿತು. ಗೌರವಾನ್ವಿತ ರಾಜ್ಯಪಾಲರೊಂದಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆಯುಕ್ತರಾದ ನಟರಾಜ್, ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ರಾಜಭವನದಲ್ಲಿ ಸಸಿ ನೆಟ್ಟು, ಪರಿಸರ ಸಂರಕ್ಷಣೆ ಮಾಡುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

 

Comments

Leave a Reply

Your email address will not be published. Required fields are marked *