ರೇಪ್‌ಗೆ ಉತ್ತೇಜನ ನೀಡುವ ಪರ್ಫ್ಯೂಮ್ ಜಾಹೀರಾತು ತೆಗೆಯುವಂತೆ ಕೇಂದ್ರ ಸೂಚನೆ

perfumes

ನವದೆಹಲಿ: ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವ ಸುಗಂಧ ದ್ರವ್ಯ (ಪರ್ಫ್ಯೂಮ್) ಬ್ರಾಂಡ್ ಜಾಹೀರಾತುಗಳನ್ನು ತೆಗೆದುಹಾಕುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟ್ವಿಟ್ಟರ್, ಯುಟ್ಯೂಬ್ ಹಾಗೂ ಟಿವಿ ಚಾನೆಲ್‌ಗಳಿಗೆ ಹೇಳಿದೆ.

ಸುಗಂಧ ದ್ರವ್ಯದ ಬ್ರಾಂಡ್ (ಪರ್ಫ್ಯೂಮ್) ಜಾಹಿರಾತುಗಳು ಉದ್ದೇಶಪೂರ್ವಕವಾಗಿ ಗ್ಯಾಂಗ್ ರೇಪ್ ಸಂಸ್ಕೃತಿಗೆ ಉತ್ತೇಜನ ನೀಡುತ್ತಿವೆ. ಇದರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪತ್ರ ಬರೆದಿದ್ದರು. ಅಲ್ಲದೆ ಅನೇಕ ಜಾಹೀರಾತಿನ ನಿದರ್ಶನಗಳನ್ನೂ ಉಲ್ಲೇಖಿಸಿದ್ದರು. ಇದಕ್ಕೆ ಶೀಘ್ರವೇ ಸ್ಪಂದಿಸಿರುವ ಸಚಿವರು ಮಧ್ಯಾಹ್ನದ ವೇಳೆಗೆ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಐವರು ಟಾಪ್ ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ – ಕಮಲಕ್ಕೆ ಹಾಯ್

ಆಯುಕ್ತರ ಪತ್ರವನ್ನಾಧರಿಸಿ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಂಡಿರುವ ಸಚಿವಾಲಯ ತನಿಖೆ ನಡೆಸಿ FIR ದಾಖಲಿಸಲು ಮತ್ತು ಸಮೂಹ ಮಾಧ್ಯಮದಿಂದ ಜಾಹೀರಾತನ್ನು ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ತನಿಖೆ ಸಂಬಂಧಿತ ವರದಿಯನ್ನು ಜೂನ್ 9ರ ಒಳಗೆ ನೀಡುವಂತೆ ಹೇಳಿದೆ.

Comments

Leave a Reply

Your email address will not be published. Required fields are marked *