140 ಪ್ರಯಾಣಿಕರ ಜೀವ ಉಳಿಸಿ ತಾನೇ ಪ್ರಾಣ ಬಿಟ್ಟ ಹೈಸ್ಪೀಡ್ ಬುಲೆಟ್ ಟ್ರೈನ್ ಚಾಲಕ

ಬೀಜಿಂಗ್: ಹೈಸ್ಪೀಡ್ ಬುಲೆಟ್ ರೈಲೊಂದು ಹಳಿ ತಪ್ಪಿದ್ದು, ಚಾಲಕ ಮೃತಪಟ್ಟ ಘಟನೆ ಚೀನಾದ ಗ್ಯುಝೌ ಪ್ರಾಂತ್ಯದಲ್ಲಿ ನಡೆದಿದೆ. ಘಟನೆಯಲ್ಲಿ 7 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬುಲೆಟ್ ರೈಲು ಚೀನಾದ ಸೌತ್ ವೆಸ್ಟರ್ನ್ ಗುಯಾಂಗ್ ಪ್ರಾಂತ್ಯದಿಂದ ದಕ್ಷಿಣ ಪ್ರಾಂತ್ಯದ ಗುವಾಂಗ್‌ಝೌಗೆ ಚಲಿಸುತ್ತಿದ್ದಾಗ ರೊಂಗ್‌ಜಿಯಾಂಗ್ ನಿಲ್ದಾಣದ ಸುರಂಗ ಪ್ರವೇಶದ್ವಾರದಲ್ಲಿ ಹಳಿತಪ್ಪಿದೆ. ರೋಜಿಯಾಂಗ್ ನಿಲ್ದಾಣದಲ್ಲಿ ಮಣ್ಣು ಕುಸಿದಿದ್ದ ಕಾರಣ ರೈಲಿನ 2 ಬೋಗಿಗಳು ಹಳಿತಪ್ಪಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೇನೆಯಲ್ಲಿ 4 ವರ್ಷ ಮಾತ್ರ ಸೇವೆ – ಶೀಘ್ರವೇ ಅಗ್ನಿಪಥ್‌ಗೆ ಅನುಮೋದನೆ

ಘಟನೆ ಬಳಿಕ ಆನ್ ಬೋರ್ಡ್ ಡೇಟಾ ಪರಿಶೀಲಿಸಿದಾಗ, ಬುಲೆಟ್ ರೈಲು ಯುಝೈ ಸುರಂಗ ಪ್ರವೇಶಿಸುವ ಸಂದರ್ಭ ಹಳಿಯಲ್ಲಿ ದೋಷವಿರುವುದನ್ನು ಚಾಲಕ ಕೇವಲ 5 ಸೆಕೆಂಡುಗಳಲ್ಲಿ ಗುರುತಿಸಿ, ತಕ್ಷಣವೇ ಬ್ರೇಕ್ ಹಾಕಿದ್ದಾನೆ. ಆದರೂ ರೈಲು 900 ಮೀಟರ್ ದೂರಕ್ಕೆ ಜಾರಿದೆ. ಇದನ್ನೂ ಓದಿ: 37 ವರ್ಷದ ಹಳೆಯ ಕಾರನ್ನು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಿದ ರವಿಶಾಸ್ತ್ರಿ

ಚಾಲಕನ ಸಮಯಪ್ರಜ್ಞೆಯಿಂದ ಸುಮಾರು 140 ಪ್ರಯಾಣಿಕರು ಪಾರಾಗಿದ್ದಾರೆ. ಘಟನೆಯಲ್ಲಿ 7 ಪ್ರಯಾಣಿಕರು ಗಾಯಗೊಂಡಿದ್ದು, ಚಾಲಕ ಮಾತ್ರ ಪ್ರಾಣ ಬಿಟ್ಟಿದ್ದಾನೆ.

Comments

Leave a Reply

Your email address will not be published. Required fields are marked *