ಭಾರತದ ಇತಿಹಾಸವನ್ನು ತಿರುಗಿಸೋಕೆ ನಾಗೇಶ್ ನೇತೃತ್ವದ ಇಲಾಖೆ ಹೊರಟಿದೆ: ಡಿಕೆಶಿ ಕಿಡಿ

ತುಮಕೂರು: ಕರ್ನಾಟಕ ರಾಜ್ಯವು ಭಾರತದ ಇತಿಹಾಸವನ್ನು ತಿರುಗಿಸೋಕೆ ನಾಗೇಶ್ ನೇತೃತ್ವದ ಇಲಾಖೆ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಜೈಲಿನಲ್ಲಿ NSUI ಕಾರ್ಯಕರ್ತರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಸರಿಯಿಲ್ಲ. ಕುವೆಂಪು, ಬಸವಣ್ಣ ಹಾಗೂ ನಾರಾಯಣಗುರು ಅವರಿಗೆ ಅವಮಾನ ಮಾಡ್ತಿರೋದು ಸರಿಯಿಲ್ಲ. ಯುವಕರು, ವಿದ್ಯಾರ್ಥಿಗಳು ಹಾಗೂ ಮಠಾಧೀಶರು ಹೋರಾಟ ಮಾಡ್ತಿದ್ದಾರೆ. ನಾಗೇಶ್ ಮನೆ ಮುಂದೆ ಅವರೇ ಅವರ ಚಡ್ಡಿಯನ್ನ ತೆಗೆದುಕೊಂಡು ಹೋಗಿ ಸುಟ್ಟಿರಬಹುದು ಎಂದು ಹೇಳಿದರು.

ಧಿಕ್ಕಾರ ಕೂಗಿದ್ದಾರೆ. ಅವರೇನು ಯಾರ ಮನೆ ಒಳಗೂ ಹೊಗಿಲ್ಲ. ಇದ್ದ ಪೇಪರನ್ನ ಸುಟ್ಟಿದ್ದಾರೆ. ನಾವು ವಿಧಾನಸೌಧದಲ್ಲಿ ಪೇಪರ್ ಹರಿದಾಕ್ತೀವಿ. ರಾಷ್ಟ್ರಧ್ವಜಕ್ಕೆ ಏನು ಅವಮಾನ ಮಾಡಿಲ್ಲ. ನಾಗೇಶ್ ಮನೆಯ ಚಡ್ಡಿಯನ್ನ ಸುಟ್ಟಿಲ್ಲ. ಯಾರ ಮನೆಗೆ ಹೋಗಿ ಚಡ್ಡಿ ಕದ್ದು ತಂದು ಸುಟ್ಟಿಲ್ಲ. ಇದು ಪ್ರತಿಭಟನೆಯ ಒಂದು ಸ್ವರೂಪ. ಎಲ್ಲರಿಗೂ ಪ್ರತಭಟನೆಯ ಹಕ್ಕಿದೆ ಎಂದರು. ಇದನ್ನೂ ಓದಿ: ಚಡ್ಡಿನಾದ್ರೂ ಸುಡ್ಲಿ, ಬೇಕಿದ್ರೆ ಪಂಚೆನಾದ್ರೂ ಸುಟ್ಟುಕೊಳ್ಳಲಿ ನಾವೇನು ಮಾಡೋದು: ಸಿ.ಸಿ ಪಾಟೀಲ್

ದೆಹಲಿಯಲ್ಲಿ ಮುಖ್ಯಮಂತ್ರಿ ಮನೆಗೆ ನುಗ್ಗಿದ್ದಾರೆ. ಅವರ ಮೇಲೆ ಯಾವ ಕೇಸ್ ಹಾಕಿದ್ದಾರೆ. ರಾಷ್ಟ್ರ ರೈತ ಮುಖಂಡನ ಮೇಲೆ ಮೋದಿ ಅಂತೇಳಿಕೊಂಡು ಮಸಿ ಬಳೀತಾರೆ. ಅವರ ಮೇಲೆ ಯಾವ ಆಕ್ಷನ್ ತೆಗೆದುಕೊಂಡಿದ್ದಾರೆ. ಬೇಲ್ ಸಿಗಲೇಬಾರದು ಅಂತಾ ಸೆಕ್ಷನ್ ಗಳನ್ನ ಹಾಕಿದ್ದಾರೆ. ತಕ್ಷಣ ಹೋಂ ಮಿನಿಸ್ಟರ್ ಹೋಗಿದ್ದಾರೆ. ಈ ಜಿಲ್ಲೆಯಲ್ಲಿ ಇಬ್ಬರು ದಲಿತರು ಸತ್ತಾಗ ಸಚಿವರು, ಶಾಸಕರು ಎಲ್ಲಿ ಹೋಗಿದ್ರು. ಯಾರಾದ್ರೂ ದಲಿತರ ರಕ್ಷಣೆ ಕೊಡಲು ಹೋಗಿದ್ರಾ. ಈಗ ಮನೆಮನೆಗೆ ಹೋಗಿ ಸಿಕ್ಕ ಸಿಕ್ಕ 20 ಜನರನ್ನ ತಂದು ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

TEXTBOOK

ಪಠ್ಯ ಪುಸ್ತಕ ವಿಚಾರಕ್ಕೆ ನಿರ್ಮಲಾನಂದ ಸ್ವಾಮೀಜಿಗಳು, ಸಿದ್ದಗಂಗಾ ಶ್ರೀಗಳು, ಸೊನ್ನೇನಹಳ್ಳಿ ಶ್ರೀಗಳು ಮಾತನಾಡಿದ್ದಾರೆ. ಸಾಹಿತಿಗಳು ಮಾಡಿದ್ದಾರೆ. ಅವರೆಲ್ಲರ ಪ್ರೇರೇಪಣೆ ಈ ಹುಡುಗರಿಗೆ ಸಿಕ್ಕಿದೆ. ಈ ರಾಜ್ಯದಲ್ಲಿ ಅನ್ಯಾಯ ಅಧರ್ಮ ಆಗ್ತಿದೆ. ಶಾಂತಿ ಭಂಗ ಉಂಟಾಗ್ತಿದೆ. ಬೇಲ್ ರಿಜೆಕ್ಟ್ ಆಗಿದೆ, ಮೇಲಿನ ಕೋರ್ಟ್ ಗೆ ಹೋಗ್ತಾರೆ. ಇದು ಅವರಿಗೇನು ಅವಮಾನ ಅಲ್ಲ. ಇದು ಹೋರಾಟದ ಸ್ವರೂಪ ಎಂದರು.

Comments

Leave a Reply

Your email address will not be published. Required fields are marked *