ಲವ್ ಜಿಹಾದ್ ಆರೋಪ – ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ

ಮಂಗಳೂರು: ಇತಿಹಾಸ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ಆಟೋ, ಟ್ಯಾಕ್ಸಿ ಮತ್ತು ವಾಹನ ಪ್ರವೇಶಿಸದಂತೆ ನಿರ್ಬಂಧ ವಿಧಿಸಿರುವ ನಾಮಫಲಕ ಅಳವಡಿಸಿರುವುದು ಕಂಡುಬಂದಿದೆ.

ಹಿಂದುಗಳ ಶ್ರದ್ಧಾ ಕೇಂದ್ರವಾದ ಸೌತಡ್ಕದಲ್ಲಿ ಅನ್ಯ ಕೋಮಿನವರು ಪ್ರವೇಶ ಮಾಡಿ ಭಕ್ತಾದಿಗಳನ್ನು ಲವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸಿರುವುದು ಕಂಡು ಬಂದಿರುವುದರಿಂದ ಹಿಂದುಯೇತರರ, ಆಟೋ, ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ದೇವಸ್ಥಾನದ ಪ್ರವೇಶ ದ್ವಾರದ ಬಳಿಯೇ ವಿಶ್ವ ಹಿಂದೂಪರಿಷತ್ ಬಜರಂಗದಳದ ಹೆಸರಿನಲ್ಲಿ ನಾಮಫಲಕ ಅಳವಡಿಸಲಾಗಿದೆ. ಇದನ್ನೂ ಓದಿ: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್‌ ಭಾಗವತ್‌

ಕೆಲ ದಿನಗಳ ಹಿಂದೆ ಇಲ್ಲಿನ ಮುಸ್ಲಿಂ ಆಟೋ ಚಾಲಕ ಲವ್ ಜಿಹಾದ್ ಎಸಗಿದ ಆರೋಪ ಕೇಳಿ ಬಂದಿತ್ತು. ಆ ಬಳಿಕ ಇದೀಗ ಅನ್ಯ ಕೋಮಿನವರ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಿರುವ ನಾಮಫಲಕ ಕಂಡು ಬಂದಿದೆ. ಸೌತಡ್ಕ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದು, ದೇವಸ್ಥಾನದ ವತಿಯಿಂದ ಯಾವುದೇ ನಿರ್ಬಂಧ ಫಲಕ ಹಾಕಿಲ್ಲ ಎಂಬ ಸ್ಪಷ್ಟನೆ ಆಡಳಿತ ಮಂಡಳಿ ನೀಡಿದೆ. ಇದನ್ನೂ ಓದಿ: ಸುಧಾರಣೆ, ಸಾಧನೆ ಮತ್ತು ರೂಪಾಂತರ ಮಂತ್ರದ ಮೇಲೆ ಭಾರತ ಪ್ರಗತಿ ಸಾಧಿಸಿದೆ: ಮೋದಿ

Comments

Leave a Reply

Your email address will not be published. Required fields are marked *