ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್

ತುಮಕೂರು: ಸೋಮವಾರ ಯುಪಿಎಸ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಹಲವರು ಉತ್ತಮ ಸಾಧನೆ ಮಾಡಿದ್ದಾರೆ.

ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಅರುಣಾ ಅವರು ನ್ಯೂಸ್ ಕೆಫೆಯಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಎಸ್.ರಂಗನಾಥ್ ಅವರ ಜೊತೆ ಮಾತನಾಡಿದರು. ಈ ವೇಳೆ ನಮ್ಮ ಮನೆಯಲ್ಲಿ ನಡೆದಿದ್ದ ಕಹಿ ಘಟನೆ ಕುರಿತು ಹಂಚಿಕೊಂಡಿದ್ದಾರೆ.

ಅರುಣಾ ಹೇಳಿದ್ದೇನು?
ನಾನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಣ್ಣ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇನೆ. ನಮ್ಮ ಅಪ್ಪ ಮಹಾಲಿಂಗಪ್ಪ, ತಾಯಿ ವಿಮಲಾಕ್ಷಿ. ನಾವು 5 ಜನ ಮಕ್ಕಳು. ನನ್ನ ತಂದೆ ತಂದೆ ಬಡ ರೈತರಾಗಿದ್ದರೂ ನಮಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಾಲ ಮಾಡಿದ್ದರು. ಆದರೆ ಸಾಲದ ಶೂಲಕ್ಕೆ ಸಿಲುಕಿ 2009ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ರು. ಆದರೆ ನನ್ನ ತಂದೆಯ ಸಾವನ್ನು ನಾನು ಸವಾಲಾಗಿ ಸ್ವೀಕರಿಸಿ ರೈತರಿಗೆ ಸೇವೆ ಮಾಡಬೇಕು ಎಂದು ಯುಪಿಎಸ್‍ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡಿದೆ. ಇದನ್ನೂ ಓದಿ:  ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ 

ಈ ವೇಳೆ ನಾನು ಪ್ರತಿಸಲ ನಾನು ಪ್ರಿಲಿಮ್ಸ್ ಪಾಸ್ ಆಗುತ್ತಿದೆ. 6 ಮೇನ್ಸ್ ಕೊಟ್ಟೆ. 3 ಮೇನ್ಸ್ ಸಮಯದಲ್ಲಿ ನನಗೆ ಆರೋಗ್ಯದಲ್ಲಿ ತೊಂದರೆ ಕಾಣಿಸಿತು. 5 ಸಲ ಫೇಲ್ ಆಯ್ತು. 6ನೇ ಪರೀಕ್ಷೆಯ ವೇಳೆ ಕೊರೊನಾ ಬಂದಿತ್ತು. ನಾನು ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದಲೇ ಪರೀಕ್ಷೆಗೆ ಹೋಗುವಂತೆ ಆಯ್ತು. ಈ ಬಾರಿಯೂ ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೆ ಎಂದು ತಿಳಿದಿರಲಿಲ್ಲ.

ಅದಕ್ಕೆ ನಾನು ಅಕಾಡೆಮಿಯನ್ನು ತೆರೆದಿದ್ದೆ. ಇಲ್ಲಿ ನಾನು ಕನ್ನಡದಲ್ಲಿ ಬರೆಯುವ ಮತ್ತು ಹಳ್ಳಿಯಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುತ್ತಿದ್ದೆ. ಅವರನ್ನು ಐಎಎಸ್ ಮಾಡಿ ನನ್ನ ಕನಸನ್ನು ಅವರ ಮೂಲಕ ನನಸು ಮಾಡಿಕೊಳ್ಳಬೇಕು ಎಂದು ತಿಳಿದುಕೊಂಡಿದ್ದೆ.

ನನ್ನ ತಂದೆ 2009ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹ ಅವರು ತಮ್ಮ ಎಲ್ಲ 5 ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಟ್ಟಿದ್ದಾರೆ. ಅವರು ನಮ್ಮನ್ನು ಅರ್ಧದಲ್ಲಿ ಕೈಬಿಟ್ಟು ಹೋಗಿಲ್ಲ. ಅವರ ಪರಿಶ್ರಮದಿಂದ ನಾನು, ನನ್ನ ತಮ್ಮ ಮತ್ತು ನನ್ನ 2ನೇ ಅಕ್ಕ ಇಂಜಿನಿಯರ್ ಮತ್ತು ನನ್ನ ತಂಗಿ ಎಂಬಿಬಿಎಸ್ ಓದಿದ್ದಳು. ಎಲ್ಲರಿಗೂ ಫೀಸ್ ಕಟ್ಟುವುದಕ್ಕೆ ಅವರು ಸಾಲ ಮಾಡಬೇಕಾಯಿತು. ನಾವು ಎಲ್ಲರೂ ಓದಿ ಉತ್ತಮ ಸ್ಥಿತಿಗೆ ಬರುವ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು. ಇದನ್ನೂ ಓದಿ: ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್

ಸುದ್ದಿ ತಿಳಿದ ತಕ್ಷಣ ನಮ್ಮ ಅಮ್ಮ ಕಣ್ಣೀರು ಹಾಕಿದರು. ಅಪ್ಪನನ್ನು ನೆನೆದು ಖುಷಿಪಟ್ಟರು.

Comments

Leave a Reply

Your email address will not be published. Required fields are marked *