‘ಕೆಜಿಎಫ್ 2’ ರಾಕಿಭಾಯ್ ಪ್ರೇರಣೆಯಿಂದ ಆಸ್ಪತ್ರೆ ಸೇರಿದ 15 ವರ್ಷದ ಬಾಲಕ

ಸಿನಿಮಾಗಳಿಂದ ಯಾರು, ಯಾವ ರೀತಿಯ ಪ್ರೇರಣೆ ಪಡೆಯುತ್ತಾರೋ ಗೊತ್ತಿಲ್ಲ. ಆದರೆ, ಹೈದರಾಬಾದ್ ನ ಹುಡುಗನೊಬ್ಬ ಕೆಜಿಎಫ್ 2 ಸಿನಿಮಾದ ರಾಕಿಭಾಯ್ ಪ್ರೇರಣೆ ಪಡೆದು ಆಸ್ಪತ್ರೆ ಸೇರಿದ್ದಾನೆ. ಅವನ ಈ ಹುಚ್ಚಾಟಕ್ಕೆ ಕುಟುಂಬ ಆತಂಕ ಪಡುವಂತಾಗಿದೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

ಕೆಜಿಎಫ್ 2 ಸಿನಿಮಾದಲ್ಲಿ ರಾಕಿಭಾಯ್, ಪ್ಯಾಕೆಟ್ ಗಟ್ಟಲೆ ಸಿಗರೇಟು ಸೇದುತ್ತಾನೆ, ಒಂದು ರೀತಿಯಲ್ಲಿ ಉಗಿಬಂಡೆ ಹೋದಂತೆ ಒಂದರ ಮೇಲೊಂದು ಸಿಗರೇಟು ಹಚ್ಚುತ್ತಾನೆ. ಇದನ್ನೇ ಮಾದರಿಯನ್ನಾಗಿ ತಗೆದುಕೊಂಡ  ಆ ಹುಡುಗ ಫುಲ್ ಪ್ಯಾಕ್ ಸಿಗರೇಟು ಸೇದಿದ್ದಾನೆ. ಪರಿಣಾಮ ತೀವ್ರ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡಿದೆ. ವಿಷಯ ತಿಳಿದ ಪಾಲಕರು ಅವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

ಅಂದಹಾಗೆ ಈ ಹುಡುಗ ಕೆಜಿಎಫ್ 2 ಸಿನಿಮಾವನ್ನು ಮೂರು ಬಾರಿ ನೋಡಿದ್ದಾನಂತೆ. ಥಿಯೇಟರ್ ನಿಂದ ಆಚೆ ಬರುತ್ತಿದ್ದಂತೆಯೇ ಥೇಟ್ ರಾಕಿಭಾಯ್ ತರಹ ಆಡುತ್ತಿದ್ದನಂತೆ. ಅದು ಅತಿರೇಕಕ್ಕೆ ಹೋಗಿ ಈಗ ಆಸ್ಪತ್ರೆ ಸೇರುವಂತಾಗಿದೆ. ಮಗನಿಗೆ ಚಿಕಿತ್ಸೆ ಕೊಡಿಸಿರುವ ಪಾಲಕರು, ಈ ರೀತಿ ಯಾರೂ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಪರ ವಿರೋಧ ಚರ್ಚೆ ಶುರುವಾಗಿದೆ. ಸಿನಿಮಾ ನೋಡಿ ಈ ರೀತಿ ಮಾಡುವುದಾದರೆ, ಅದೆಷ್ಟೋ ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿವೆ. ಅದರಲ್ಲೂ ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ, ಸಮಾಜಕ್ಕೆ ನೀಡಿದ ಸಂದೇಶ ಎಂತಹದ್ದು ಅಂತ ಎಲ್ಲರಿಗೂ ಗೊತ್ತಿದೆ. ಆದರೆ, ಯಾರೂ ಬಂಗಾರದ ಮನುಷ್ಯ ಆಗಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *