ಡಿಕೆಶಿ ನೀವು ಅಷ್ಟೊಂದು ಅಸಹಾಯಕರೇ?- ಕೆಪಿಸಿಸಿ ಅಧ್ಯಕ್ಷರ ಕಾಲೆಳೆದ ಬಿಜೆಪಿ

ಬೆಂಗಳೂರು: ಸದ್ಯ ಕಾಂಗ್ರೆಸ್‍ನಲ್ಲಿ ಶಾಸಕರು ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಹೇಳುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಪಕ್ಷವು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾಲೆಳೆದಿದೆ. ಇದನ್ನೂ ಓದಿ: ನಮ್ಮ ಜನರಿಗೆ ಸಿದ್ದರಾಮಯ್ಯ ಅವಶ್ಯಕತೆ ಇದೆ, ಅವರೇ ಸಿಎಂ ಆಗಬೇಕು: ಬೈರತಿ ಸುರೇಶ್

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಮೊದಲೆಲ್ಲ ಕಾಂಗ್ರೆಸ್ ನಾಯಕರ ಕಾರ್ಯಕ್ರಮ ಡಿಕೆಶಿ ಪರವಾಗಿರುತ್ತಿತ್ತು. ಈಗ ಆ ಕಾರ್ಯಕ್ರಮಗಳು ಸಿದ್ದರಾಮಯ್ಯ ಪರವಾಗಿ ರೂಪುಗೊಳ್ಳುತ್ತಿವೆ. ಶಾಸಕರ ಧ್ವನಿಗಳೂ ಸಿದ್ದರಾಮಯ್ಯ ಪರವಾಗಿ ಮೊಳಗುತ್ತಿದೆ. ಮುಂದೆ ಕನಕಪುರದಲ್ಲೂ ಸಿದ್ದರಾಮಯ್ಯ ಹವಾ ಮೂಡಿಸುವರೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಕೊಟ್ಟ ಬೊಕ್ಕೆ ಬಿಸಾಕಿ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದು ಏಕೆ?

ಇನ್ನೊಂದು ಟ್ವೀಟ್‍ನಲ್ಲಿ, ಡಿಕೆಶಿ ಅವರೇ ನೀವು ಹೇಳಿದಂತೆಯೇ ಆಗಲಿದೆ. ನೀವು ಊಟ ತಯಾರಿಸಿಡಿ, ಊಟ ಮಾಡಲು ಬೇರೆಯವರು ತುದಿಗಾಲಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರೆದುರು ಡಿಕೆಶಿ ಇಷ್ಟೊಂದು ಅಸಹಾಯಕ ಎನಿಸಿಕೊಳ್ಳಬಾರದಿತ್ತು ಎಂದು ಬರೆದು ಅಸಾಹಾಯಕ ಡಿಕೆಶಿ ಅಂತ ಹ್ಯಾಶ್ ಟ್ಯಾಗ್ ಬಳಸಲಾಗಿದೆ. ಇದನ್ನೂ ಓದಿ: RSS ಬಗ್ಗೆ ಸಿದ್ದರಾಮಯ್ಯಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ: ಎಸ್.ಟಿ.ಸೋಮಶೇಖರ್ ತಿರುಗೇಟು

Comments

Leave a Reply

Your email address will not be published. Required fields are marked *