ಸಿದ್ದರಾಮಯ್ಯರಿಗೆ ತಾಕತ್ ಇದ್ರೆ ಗೋ ಮಾಂಸ ತಿಂದು ತೋರಿಸಲಿ: ಪ್ರಭು ಚೌಹಾಣ್ ಸವಾಲ್

ಬೀದರ್: ತಾಕತ್ ಇದ್ದರೆ ನನ್ನ ಮುಂದೆ ಸಿದ್ದರಾಮಯ್ಯ ಗೋ ಮಾಂಸ ತಿನ್ನಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಸವಾಲೊಡ್ಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಗೋ ಹತ್ಯೆ ಕಾಯಿದೆಯನ್ನು ರದ್ದು ಮಾಡುತ್ತೇನೆ ಹಾಗೂ ಗೋ ಮಾಂಸ ತಿನ್ನುತ್ತೇನೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಂತೆ ಬೀದರ್‍ನಲ್ಲಿ ಪ್ರತಿಕ್ರಿಯಿಸಿದ ಪ್ರಭು ಚೌಹಾಣ್ ಅವರು, ನಾನು ಸಿದ್ದರಾಮಯ್ಯಗೆ ಆಹ್ವಾನ ಮಾಡುತ್ತೇನೆ. ನನ್ನ ಮುಂದೆ ಕುಳಿತು ಮಾಂಸ ತಿಂದು ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ: ಸಿದ್ದರಾಮಯ್ಯ

ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು, ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ ಎಂದಿದ್ದರು. ಅಲ್ಲದೇ ಸಗಣಿ, ಗಂಜಲ ಎತ್ತದ, ಹಸು ಸಾಕದ, ಉಳಿಮೆ ಮಾಡದವರು ಗೋ ಹತ್ಯೆ ಬಗ್ಗೆ ಮಾತನಾಡುತ್ತಾರೆ. ಅವರಿಂದ ನಾವು ಪಾಠ ಕಲಿಯಬೇಕೆ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಗೋ ಪೂಜೆ ಮಾಡುವವರು ಗೋಮಾಂಸ ತಿಂತೀನಿ ಅಂದ್ರೆ ಅವರಿಗಿಂತ ಕಟುಕ ಈ ಪ್ರಪಂಚದಲ್ಲಿ ಯಾರು ಇಲ್ಲ: ಆರ್.ಅಶೋಕ್

ಅಲ್ಪ ಸಂಖ್ಯಾತರ ಹಕ್ಕುಗಳು ಮತ್ತು ಅವರ ಪರವಾಗಿ ಮಾತನಾಡಿದರೆ, ಸಂಘ ಪರಿವಾರದವರು ನೀನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದಿಯಾ ಎಂದು ಕೇಳುತ್ತಾರೆ. ನಮ್ಮ ಧರ್ಮದಲ್ಲಿ ನಿಷ್ಠೆಯ ಜೊತೆಗೆ ಇತರೆ ಧರ್ಮಗಳನ್ನು ಗೌರವಿಸುವ ಸಹಿಷ್ಣುತೆ ಇರಬೇಕು. ಪರ ಧರ್ಮದ ಬಗ್ಗೆ ದ್ವೇಷ, ಅಸೂಯೆ ಇದ್ದರೆ ನಾವು ಮನುಷ್ಯರಾಗಲು ಅರ್ಹರಲ್ಲ. ನಾವೆಲ್ಲ ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *